ಕುಂಬಳೆ: ಕುಡಾಲು ಮೇರ್ಕಳ ಹಾಗೂ ಬಾಡೂರು ಗ್ರಾಮಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳು ಮಂಗಳವಾರದಿಂದ ಆರಂಭಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಬುಧವಾರ ಬೆಳಗ್ಗೆ 7 ಕ್ಕೆ ಗಣಪತಿ ಹೋಮ, ಅಂಕುರಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಧ್ವಾರ ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ, ಪೂರ್ವಾಹ್ನ 10 ರಿಂದ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಅವರಿಂದ ಶಮಂತಕ ಮಣಿ ಹರಿಕಥಾ ಸಂಕೀರ್ತನೆ ನಡೆಯಿತು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಅಂಕುರ ಪೂಜೆ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7 ರಿಂದ ಕುಮಾರ ಸ್ವಾಮಿ ನಾಟ್ಯಾಲಯ ಪುತ್ತಿಗೆ ಇದರ ವಿದುಷಿ ಭವ್ಯಶ್ರೀ ಬಾಡೂರು ಇವರ ಶಿಷ್ಯೆಯರಿಂದ ನೃತ್ಯ ವೈಭವ ಪ್ರದರ್ಶನಗೊಂಡಿತು.ಬಳಿಕ ಲತಾ ಇ.ಕೇಶವ ಭಟ್ ಎಡಕ್ಕಾನ ಮತ್ತು ಶಿಷ್ಯೆಯರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಇದಕ್ಕೂ ಮೊದಲು ಬೆಳಿಗ್ಗೆ ಶ್ರೀದೈವಗಳಿಗೆ ಬೆಳ್ಳಿಯ ಮೊಗ ಸಮರ್ಪಣೆ ನಡೆಯಿತು.
ಇಂದಿನ ಕಾರ್ಯಕ್ರಮ:
ಬೆಳಿಗ್ಗೆ 7 ರಿಂದ ಗಣಪತಿಹೋಮ, ಅಂಕುರಪೂಜೆ, ಚೋರಶಾಂತಿ, ಅದ್ಭುತಶಾಂತಿ, ಸ್ವಶಾಂತಿ, ನಾಶಾಂತಿ ಹೋಮಗಳು, ಹೋಮಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ಅಂಕುರಪೂಜೆ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ 12ರ ವರೆಗೆ ರಾಗಮಾಲಿಕಾ ನೆಲ್ಲಿಕಟ್ಟೆ ತಂಡದವರಿಂದ ಭಕ್ತಿ ಸ್ವರ-ಸಿಂಚನ, ರಾತ್ರಿ 7 ರಿಂದ ರಾಮಕೃಷ್ಣ ಕಾಟುಕುಕ್ಕೆ ತಂಡದವರಿಂದ ಭಕ್ತಿ ರಸಮಂಜರಿ ನಡೆಯಲಿದೆ.