ಮಧೂರು : ಮಧೂರು ಬಂಟರ ಸಮಿತಿ ಮತ್ತು ಬಂಟ ಮಹಿಳಾ ಸಮಿತಿ ಸಮಾವೇಶ ಮಧೂರು ಬಂಟರ ಸಮಿತಿಯ ಮಾನಕ್ಕು -ಕೊರಗಪ್ಪ ಆಳ್ವ ಸ್ಮಾರಕ ಸಭಾ ಭವನದಲ್ಲಿ ಜರುಗಹಿತು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡ್ ಸಮಾವೇಶ ಉದ್ಘಾಟಿಸಿದರು. ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಜಿಲ್ಲಾ ಬಂಟರ ಸಂಘದ ಆಶ್ರದಲ್ಲಿ ತುಳುನಾಡ ಮಾಣಿಕ್ಯ, ಕೊಡುಗೈ ದಾನಿ ಕುಳೂರು, ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಮಹೋತ್ಸವ ಪುರಸ್ಕಾರ ಹಾಗೂ ಕೆ. ಕೆ ಶೆಟ್ಟಿ ಅವರಿಗೆ ಅಂತರಾಷ್ಟ್ರೀಯ ಆರ್ಯ ಭಟ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಜ. 16ರಂದು ಬೆಳಗ್ಗೆ 9.30ಕ್ಕೆ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾದ ಸಭಾ ಭವನದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ತೀರ್ಮಾನ ಕೈಗೊಳ್ಳಲಾಯಿತು.
ವಲಯ ಸಂಘದ ಕೋಶಾಧಿಕಾರಿ ಅಶೋಕ್ ರೈ ಸೂರ್ಲು, ಮಹಿಳಾ ಸಮಿತಿ ಗೌರವ ಅಧ್ಯಕ್ಷೆ ಯಮುನಾ ಎಸ್ ಶೆಟ್ಟಿ ಕೂಡ್ಲು, ಅಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಕುದ್ರೆಪ್ಪಾಡಿ, ಶೈಲಜಾ ಪಿ ಶೆಟ್ಟಿ ಮಾಯಿಪಾಡಿ,ಸುಜಾತ ಯೆಶೋಧರ ರೈ ಕಜೆ, ಬಾಲಕೃಷ್ಣ ರೈ ಗಂಗೆ, ಸಂತೋಷ ರೈ ಗಂಗೆ, ಬಾಲಕೃಷ್ಣ ಮಧೂರು, ,ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ,ಜಯಲಕ್ಷ್ಮಿ ಅಡಪ, ದೇವಕಿ ರೈ ಗಂಗೆ, ಶೋಭಾ ಕೊಲ್ಯ ರಜನಿ, ರಾಜೀವಿ, ಶ್ರೀದೇವಿ, ಸವಿತಾ ಮಾಯಿಪಾಡಿ, ರಂಜಿತಾ, ಸುಜಾತ ಕೊಲ್ಯ,ಮಾಲತಿ ಎಸ್ ರೈ ಮಣ್ಣಿಪ್ಪಾಡಿ ಮೊದಲದವರು ಉಪಸ್ಥಿತರಿದ್ದರು. ಅಶೋಕ್ ರೈ ಸ್ವಾತಿಸಿ ಪ್ರಾಸ್ತವಿಕ ನುಡಿದರು. ಕಾರ್ಯದರ್ಶಿ ಗಣೇಶ್ ರೈ ನಾಯಕೋಡು ಧನ್ಯವಾದ ಸಲ್ಲಿಸಿದರು.