ಕುಂಬಳೆ: ಬೈಕ್‍ಗಳ ಸೈಲೆನ್ಸರ್ ಹಾಗೂ ನಂಬರ್ ಪ್ಲೇಟ್ ಕಳಚಿಟ್ಟು, ಅತಿಯಾದ ಶಬ್ದದೊಂದಿಗೆ ರಸ್ತೆಯಲ್ಲಿ ಸಂಚರಿಸುತ್ತಾ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಚೌಕಿ ನಿವಾಸಿ ಮಹಮ್ಮದ್ ಜುನೈದ್ ಬಿ.ಎ ಹಾಗೂ ಅನಮಗೂರು ನಿವಾಸಿ ಅಹಮ್ಮದ್ ಅಲ್ ಹಂಬಲ್ ಬಂಧಿತರು. ಕುಂಬಳೆ ಬದ್ರಿಯಾ ನಗರದ ರಸ್ತೆಯಲ್ಲಿ ಜನರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಶಬ್ದದೊಂದಿಗೆ ಸಂಚಾರ ನಡೆಸುತ್ತಿದ್ದಾಗ ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದೆ. ಈ ಇಬ್ಬರೂ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬೈಕ್ ಸವಾರಿ ನಡೆಸುತ್ತಿದ್ದ ಬಗ್ಗೆ ಸ್ಥಳೀಯ ನಾಗರಿಕರೂ ದೂರು ಸಲ್ಲಿಸಿದ್ದರು.