ಕುಂಬಳೆ: ಜಿಲ್ಲಾ ದುರಂತ ನಿವಾರಣಾ ಕಾರ್ಯಗಾರ, ದೇಶೀಯ ದುರಂತ ನಿವಾರಣಾ ಸೇನೆ ಇವುಗಳ ಸಹಯೋಗದೊಂದಿಗೆ ಅನಂತಪುರ ಕೈಗಾರಿಕಾ ಪ್ರಾಂಗಣದಲ್ಲಿ ಶುಕ್ರವಾರ ಸಿ ಬಿ ಆರ್ ಎನ್ (ಆರೋಗ್ಯ, ಜೈವಿಕ, ವಿಕಿರಣ, ನ್ಯೂಕ್ಲಿಯರ್) ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.
ಕುಂಬಳೆಯಲ್ಲಿರುವ ಅನಂತಪುರ ಕೈಗಾರಿಕಾ ಏರಿಯಾದ, ಕೈಗಾರಿಕಾ ಕೇಂದ್ರಗಳಲ್ಲಿರುವ ರಾಸಾಯನಿಕಗಳಿಂದ ಸಂಭವಿಸಬಹುದಾದ ರಾಸಾಯನಿಕ ದುರಂತಗಳನ್ನು ಗಣನೆಗೆ ತೆಗೆದುಕೊಂಡು ದುರಂತದ ಅನಾಹುತವನ್ನು ಲಘೂಕರಿಸುವ ದೃಷ್ಟಿಯಿಂದ, ಆ ಸಂದರ್ಭದಲ್ಲಿ ಮಾಡಬೇಕಾದ ತುರ್ತು ಕಾರ್ಯಗಳನ್ನು ಪರಿಚಯಿಸುವ ಭಾಗವಾಗಿ ಅಣಕು ಪ್ರದರ್ಶನ ಏರ್ಪಡಿಸಲಾಯಿತು.
ತುರ್ತು ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕಾ. ಕೇಂದ್ರದ ಎಲ್ಲಾ ವಿಭಾಗಗಳು ಮುಂಜಾಗ್ರತಾ ಕ್ರಮದ ಸಜ್ಜೀಕರಣಗಳನ್ನು ಮಾಡಿಕೊಳ್ಳಬೇಕೆಂದು ಅಣಕು ಪ್ರದರ್ಶನದ ಮೂಲಕ ತೋರಿಸಿ ಕೊಡಲಾಯಿತು.
ದೇಶೀಯ ದುರಂತ ನಿವಾರಣಾ ಸೇನೆ 4ವೇ ಬೆಟಾಲಿಯನ್ ಉಪ ನಿರ್ದೇಶಕ ಪ್ರವೀಣ್, ಮಂಜೇಶ್ವರ ತಹಶೀಲ್ದಾರ್ ಎಂ. ಶ್ರೀನಿವಾಸ್, ಉಪ್ಪಳ ಅಗ್ನಿಶಾಮಕ ದಳದ ಅಧಿಕಾರಿ ಸಿ ಪಿ ರಾಜನ್ ಅಣಕು ಪ್ರದರ್ಶನಕ್ಕೆ ನೇತೃತ್ವ ನೀಡಿದರು. ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರ, ಪೋಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಕೈಗಾರಿಕಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.