ಬದಿಯಡ್ಕ: ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇದರ ವತಿಯಿಂದ ಅಗಸ್ಟ್-ಸಪ್ಟೆಂಬರ್ 2024 ನೇ ಸಾಲಿನ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ, ಬದಿಯಡ್ಕದ ಡಾ ಸ್ನೇಹ ಪ್ರಕಾಶ್ ಪೆರ್ಮುಖ ಇವರ ಮೂರು ಒನ್ಲೈನ್ ಕಲಿಕಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಬೆಂಗಳೂರಿನ ಡೊಮಿನಿಕ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಆಯುಕ್ತ ಸಾಯಿ ಲೋಕೇಶ್ 95.5 ಶೇ., ಡೀಮ್ಸ್ ಅಕಾಡೆಮಿ ಗುಂಜರ್ ಬೆಂಗಳೂರು ಇದರ 10ನೇ ತರಗತಿಯ ವಿದ್ಯಾರ್ಥಿನಿ ದೀಪ್ತಾ ಕುಳೂರು 94 ಶೇ. ಹಾಗೂ ಹುಬ್ಬಳ್ಳಿ ಚಿನ್ಮಯಾ ವಿದ್ಯಾಲಯದ 8ನೇ ತರಗತಿಯ ವಿದ್ಯಾರ್ಥಿನಿ ಲಹರಿ ಶ್ರೀ ಶೆಟ್ಟಿ 91.25 ಶೇ. ಅಂಕಗಳನ್ನು ಪಡೆದಿರುತ್ತಾರೆ. ಡಾ ಸ್ನೇಹ ಪ್ರಕಾಶ್ ಪೆರ್ಮುಖ ಇವರು ಕಳೆದ 4 ವರ್ಷಗಳಿಂದ ಒನ್ಲೈನ್ ಕರ್ನಾಟಕ ಸಂಗೀತ ಹಾಗೂ ಸುಗಮ ಸಂಗೀತ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ.