ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 11 ರಿಂದ 16 ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಜರಗಲಿದ್ದು ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. ಜೀರ್ಣೋದ್ದಾರ ಸಮಿತಿಯು ಈ ಸಂದರ್ಭದಲ್ಲಿ ಶಿವ ಪಂಚಾಕ್ಷರಿ ಲೇಖನ ಯಜ್ಞ ಮುನ್ನಡೆಸಲು ನಿರ್ಧರಿಸಿದ್ದು ಇದರ ಪೂರ್ವಭಾವಿ ಸಭೆಯು ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಜೈ ತುಳುನಾಡ್ ಕಾಸರಗೋಡು ವಲಯ ಸಮಿತಿಯನ್ನು ತುಳು ಲಿಪಿಯಲ್ಲಿ ಶಿವ ಪಂಚಾಕ್ಷರಿಯನ್ನು ಕಲಿಸಿಕೊಡಬೇಕಾಗಿ ಆಹ್ವಾನಿಸಿದ್ದರು. ಇದರ ಉದ್ಘಾಟನಾ ಕಾರ್ಯಕ್ರಮವು ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಆಡಳಿತ ಮುಕ್ತೆಸರ ವೈ ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ಜರಗಿತು, ಯಕ್ಷಗುರುಗಳೂ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಮದಂಗಲ್ಲು ಆನಂದ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ತಮ್ಮ ತುಳುಭಾಷೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು
ಜೈ ತುಳುನಾಡ್ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ,ತುಳು ಲಿಪಿ ಶಿಕ್ಷಕಿ ವಿನೋದ ಪ್ರಸಾದ್ ರೈ ತುಳುಲಿಪಿಯ ಬಗ್ಗೆ ಮಾಹಿತಿ ನೀಡಿ, ನಂತರ, ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿಯನ್ನು ತುಳು ಲಿಪಿಯಲ್ಲಿ ಬರೆದು ತೋರಿಸುವ ಮೂಲಕ ತುಳು ಲಿಪಿ ಶಿವ ಪಂಚಾಕ್ಷರಿ ಲೇಖನ ಯಜ್ಞಕ್ಕೆ ಚಾಲನೆಯನ್ನು ನೀಡಿದರು.ಜೈ ತುಲುನಾಡ್ ನಾ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು ಸಂಘಟನೆ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತುಳುಲಿಪಿ ನಾಮಫಲಕವನ್ನು ಅಳವಡಿಸಲು ಸಮಿತಿಯ ಅಧ್ಯಕ್ಷರಿಗೆ ನೀಡಲಾಯಿತು. ಡಾ ಕೃಷ್ಣಮೂರ್ತಿ ವೈ.ವಿ. ಸ್ವಾಗತಿಸಿ, ಜೈ ತುಲುನಾಡ್ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷೆ ಕುಶಲಾಕ್ಷಿ ವಿ ಕಣ್ವತೀರ್ಥ ವಂದಿಸಿದರು. ಕ್ಷೇತ್ರದ ಮಹಿಳಾ ಘಟಕದ ಸದಸ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಸಮಿತಿ ಸಂಯೋಜಕ0 .ಚಂದ್ರಶೇಖರ ಭಟ್ ಏತಡ್ಕ ನಿರೂಪಿಸಿದರು, ಜೈ ತುಲುನಾಡ್ ನಾ ಸದಸ್ಯರುಗಳಾದ ಕವಿ ಶ್ರೀ ವಿಜಯರಾಜ್ ಪುಣಿಂಚತ್ತಾಯ, ಕಾರ್ತಿಕ್ ಬದಿಯಡ್ಕ, ಉತ್ತಮ್ ನೀರ್ಚಾಲು, ಜಗನ್ನಾಥ ಕುಲಾಲ್ ಬದಿಯಡ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ತುಳುಲಿಪಿ ಪಂಚಾಕ್ಷರಿ ಲೇಖನ ಯಜ್ಞದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು.ಭಾಗವಹಿಸಿದ ಎಲ್ಲರಿಗೂ ಕ್ಷೇತ್ರದ ಸಮಿತಿಯ ವತಿಯಿಂದ ಪ್ರಮಾಣ ಪತ್ರ ವಿತರಿಸಿದರು. ಜೈ ತುಲುನಾಡ್ ವತಿಯಿಂದ ಎಲ್ಲರಿಗೂ ತುಲು ಲಿಪಿ ಚಾರ್ಟನ್ನು ಉಚಿತವಾಗಿ ಹಂಚಲಾಯಿತು.
ಇದೇ ದಿನ ಜೈ ತುಲುನಾಡ್ ಸಂಘಟನೆಯ ಸದಸ್ಯರು, ನಾರಂಪಾಡಿ ಉಮಾಮಹೇಶ್ವರ ಕ್ಷೇತ್ರಕ್ಕೂ ಭೇಟಿನೀಡಿ ತುಳುಲಿಪಿ ನಾಮಫಲಕವನ್ನು ಅಳವಡಿಸಲು ವಿಜ್ಞಾಪನಾ ಪತ್ರವನ್ನು ನೀಡಿದರು.