ಢಾಕಾ(PTI): ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನೂರಾರು ಜನರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಶೇಕ್ ಹಸೀನಾ ಮತ್ತು ಇತರ 11 ಮಂದಿಯ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಎರಡನೇ ಬಾರಿಗೆ ಬಂಧನ ವಾರಂಟ್ ಜಾರಿ ಮಾಡಿದೆ.
11 ಮಂದಿಯಲ್ಲಿ ಸೇನೆಯ ಮಾಜಿ ಜನರಲ್‌ಗಳು, ಮಾಜಿ ಪೊಲೀಸ್ ಮುಖ್ಯಸ್ಥರೂ ಸೇರಿದ್ದಾರೆ. 'ಫೆ.12ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು, ಹಸೀನಾ ಸೇರಿದಂತೆ 11 ಮಂದಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು ಎಂದು ಮಂಡಳಿ ಸೂಚಿಸಿದೆ' ಎಂದು ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಮಾಹಿತಿ ನೀಡಿದರು.
'ದೇಶದಲ್ಲಿ 15 ವರ್ಷ ಭಯದ ವಾತಾವರಣ ಇತ್ತು. ಭಯೋತ್ಪಾದನಾ ವಿರೋಧಿ ಮತ್ತು ಅಂತರರಾಷ್ಟ್ರೀಯ ಸಂಚಿನ ಅಪರಾಧ ಘಟಕ, ಗುಪ್ತಚರ ಪಡೆ ಸೇರಿದಂತೆ ಹಲವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನೂರಾರು ಜನರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಇವರಲ್ಲಿ ಹಲವರು ವಾಪಸು ಬರಲೇ ಇಲ್ಲ' ಎಂದರು.