ಆಲಪ್ಪುಳ: ಶಾಸಕಿ ಯು ಪ್ರತಿಭಾ ಪುತ್ರನನ್ನು ಸಚಿವ ಸಾಜಿ ಚೆರಿಯನ್ ಸಮರ್ಥಿಸಿಕೊಂಡಿದ್ದಾರೆ. ಮಕ್ಕಳು ಎಂದಾದ ಮೇಲೆ ಅವರು ಒಟ್ಟಿಗೆ ಸೇರುತ್ತಾರೆ. ಧೋಮಪಾಮನ ಮಾಡುತ್ತಾರೆ. ಅದು ದೊಡ್ಡ ತಪ್ಪಲ್ಲ ಎಂದಿರುವರು.
ಎಫ್‍ಐಆರ್‍ನಲ್ಲಿ ಧೂಮಪಾನ ಮಾಡಿದ್ದಾರೆ ಎಂದು ಮಾತ್ರ ಹೇಳಲಾಗಿದೆ. ಧೂಮಪಾನ ಮಾಡುವುದು ದೊಡ್ಡ ತಪ್ಪಲ್ಲ ಎಂದು ಸಚಿವರು ಹೇಳಿದರು. ಕಾಯಂಕುಳಂನಲ್ಲಿ ನಡೆದ ಎಸ್.ವಾಸುದೇವನ್ ಪಿಳ್ಳೈ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಯು ಪ್ರತಿಭಾ ಅವರ ಸಮ್ಮುಖದಲ್ಲಿ ಸಚಿವರು ಈ ಭಾಷಣಗೈದು ಅಚ್ಚರಿಮೂಡಿಸಿದರು.
ತಾನೂ ಧೂಮಪಾನ ಮಾಡಿದ್ದಿದೆ. ಧೂಮಪಾನಕ್ಕೆ ಜಾಮೀನು ರಹಿತ ಆರೋಪವನ್ನು ಏಕೆ ವಿಧಿಸಲಾಗಿದೆ ಎಂದು ಸಾಜಿ ಚೆರಿಯನ್ ಕೇಳಿದರು. ಪ್ರತಿಭಾ ಅವರ ಪುತ್ರ ಹಾಗೂ ಸ್ನೇಹಿತರು ಸುದ್ದಿ ತಿಳಿಸಿದ್ದರು. ಪ್ರತಿಭಾ ಅವರ ಮಗ ತಪ್ಪು ಮಾಡಿದ್ದರೆ ಅದು ತಪ್ಪು. ಮಗನ ತಪ್ಪಿಗೆ ಪ್ರತಿಭಾ ಮಾಡಿದ್ದೇನು? ಎಂದ ಸಾಜಿ ಚೆರಿಯನ್, ಶಾಸಕಿ ಯು ಪ್ರತಿಭಾರನ್ನು ಕನಿಷ್ಠ ಪಕ್ಷ ಮಹಿಳೆಯಾಗಿ ಪರಿಗಣಿಸಬೇಕು ಎಂದರು.
ಯು ಪ್ರತಿಭಾ ಅವರನ್ನು ಕೋಮುವಾದಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಯು ಪ್ರತಿಭಾ ಕೇರಳದ ಅತ್ಯುತ್ತಮ ಶಾಸಕರಲ್ಲಿ ಒಬ್ಬರು ಎಂದು ಅವರು ಹೇಳಿದರು.
ಕುಟ್ಟನಾಡ್ ಅಬಕಾರಿ ತಂಡವು ಶಾಸಕಿ ಯು ಪ್ರತಿಭಾರ ಪುತ್ರ ಕಣಿವ್ ಸೇರಿದಂತೆ ಒಂಬತ್ತು ಜನರನ್ನು ಗಾಂಜಾದೊಂದಿಗೆ ಬಂಧಿಸಿದ್ದರು. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಯು ಪ್ರತಿಭಾ ಫೇಸ್ ಬುಕ್ ಲೈವ್ ನಲ್ಲಿ ಬಂದು ಮಾಧ್ಯಮಗಳ ವಿರುದ್ಧ ಟೀಕೆ ಮಾಡಿದ್ದರು.
ಇದು ಸುಳ್ಳು ಸುದ್ದಿಯಾಗಿದ್ದು, ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ, ಎಫ್‍ಐಆರ್‍ನಲ್ಲಿರುವ ಮಾಹಿತಿಯು ಶಾಸಕರ ವಾದವನ್ನು ಅಲ್ಲಗಳೆಯುತ್ತದೆ. ಕಣಿವ್ ಪ್ರಕರಣದ ಒಂಬತ್ತನೇ ಆರೋಪಿ. ಎನ್‍ಡಿಪಿಎಸ್ ಕಾಯ್ದೆಯ ಸೆಕ್ಷನ್ 25 ಬಿ ಮತ್ತು 27 ಬಿ ಅಡಿಯಲ್ಲಿ ಕಣಿವ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಹೊಂದಿದ್ದಕ್ಕಾಗಿ ಮತ್ತು ಬಳಕೆಗಾಗಿ ಎಫ್‍ಐಆರ್ ದಾಖಲಿಸಲಾಗಿದೆ. ಎಫ್‍ಐಆರ್‍ನ ಪ್ರಕಾರ, ತಂಡದಿಂದ ಮೂರು ಗ್ರಾಂ ಗಾಂಜಾ, ಗಾಂಜಾ ಬೆರೆಸಿದ ತಂಬಾಕು ಮಿಶ್ರಣ, ಕೆಳಭಾಗದಲ್ಲಿ ರಂಧ್ರವಿರುವ ಪ್ಲಾಸ್ಟಿಕ್ ಬಾಟಲಿ ಮತ್ತು ಹಸಿರು ಪಪ್ಪಾಯಿ ಕಾಂಡವನ್ನು ವಶಪಡಿಸಿಕೊಳ್ಳಲಾಗಿದೆ.