ಹೆಲ್ಸಿಂಕಿ: ಬಾಲ್ಟಿಕ್ ಸಾಗರ ಪ್ರದೇಶದಲ್ಲಿ ಸಮುದ್ರದ ಆಳದಲ್ಲಿರುವ ಕೇಬಲ್‌ಗಳ ರಕ್ಷಣೆಗೆ 'ಬಾಲ್ಟಿಕ್ ಸೆಂಟ್ರಿ' ಎಂಬ ನೂತನ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ತಿಳಿಸಿದರು.
ಬಾಲ್ಟಿಕ್ ಸಾಗರ ಪ್ರದೇಶದಲ್ಲಿ ನೆಲೆಗೊಂಡಿರುವ ನ್ಯಾಟೊ ರಾಷ್ಟ್ರಗಳ ನಾಯಕರ ಸಭೆಯು ಹೆಲ್ಸಿಂಕಿಯಲ್ಲಿ ಮಂಗಳವಾರ ನಡೆಯಿತು.
ಈ ವೇಳೆ ಮಾತನಾಡಿದ ರುಟ್ಟೆ ಅವರು 'ಕೇಬಲ್‌ಗಳ ರಕ್ಷಣೆಗಾಗಿ ಕಡಲ ಗಸ್ತು ವಿಮಾನ ಹಾಗೂ ಯುದ್ಧನೌಕೆಗಳನ್ನು ಬಳಸಲಾಗುತ್ತದೆ. ಇದು ಬಾಲ್ಟಿಕ್ ಪ್ರದೇಶದಲ್ಲಿ ನಮ್ಮ ಕಣ್ಗಾವಲನ್ನು ಹೆಚ್ಚಿಸುತ್ತದೆ. ಯಾವುದೇ ದಾಳಿಯನ್ನು ತಡೆಯಲು ನೌಕಾಪಡೆಯಿಂದ ಡ್ರೋನ್ ಕಾರ್ಯಾಚರಣೆಯನ್ನೂ ನಡೆಸಲಾಗುವುದು' ಎಂದು ತಿಳಿಸಿದರು.
ಬಾಲ್ಟಿಕ್ ಸಾಗರ ಪ್ರದೇಶದಲ್ಲಿ ರಷ್ಯಾವು ಅನೇಕ ಚಟುವಟಿಕೆ ನಡೆಸುತ್ತಿದೆ ಎಂಬ ಕುರಿತು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ನ್ಯಾಟೊ ಈ ಸಭೆ ನಡೆಸಿದೆ.