ವಾಷಿಂಗ್ಟನ್: ಎಚ್5ಎನ್1 (ಹಕ್ಕಿ ಜ್ವರ) ಸೋಂಕಿನಿಂದ ಲುಯೇಸಿಯಾನ ರಾಜ್ಯದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಈ ಸೋಂಕಿನಿಂದ ಅಮೆರಿಕದಲ್ಲಿ ಸಾವು ಸಂಭವಿಸಿದ ಮೊದಲ ಪ್ರಕರಣ ಇದಾಗಿದೆ.
'ಹಕ್ಕಿಗಳ ಹಿಂಡು ತಂಗಿದ್ದ ಜಾಗದ ಸಂಪರ್ಕಕ್ಕೆ ಬಂದಿದ್ದರಿಂದ ವ್ಯಕ್ತಿಗೆ ಸೋಂಕು ತಗುಲಿತ್ತು.
'ಇದೊಂದು ಗಂಭೀರ ಪ್ರಕರಣ' ಎಂದು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. 'ಈ ಪ್ರಕರಣದಿಂದ ಗಾಬರಿ ಪಡಬೇಕಾಗಿಲ್ಲ. ಕೋಳಿ ಮತ್ತು ಗೋವು ಸಾಕಾಣಿಕೆ ಮಾಡುವವರು, ಪಕ್ಷಿಗಳ ಸಂಪರ್ಕದಲ್ಲಿ ಕೆಲಸ ಮಾಡುವವರು ತುಸು ಎಚ್ಚರಿಕೆ ವಹಿಸಬೇಕು' ಎಂದು ಲುಯೇಸಿಯಾನದ ಆರೋಗ್ಯ ಇಲಾಖೆ ಹೇಳಿದೆ.