ಮುಳ್ಳೇರಿಯ: ಇರಿಯಣ್ಣಿ ಪೇರಡ್ಕ ಮಹಾತ್ಮಾಜಿ ಗ್ರಂಥಾಲಯ ಮತ್ತು ವಾಚನಾಲಯದ ನೇತೃತ್ವದಲ್ಲಿ ಎಂ.ಟಿ. ವಾಸುದೇವನ್ ನಾಯರ್ ಸಂಸ್ಮರಣೆ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಜ್ಯೋತಿ ಕುಮಾರಿ ಸಂಸ್ಮರಣೆ ನಡೆಸಿದರು. ಸಾಹಿತ್ಯ ಮತ್ತು ಸಿನಿಮಾದ ಮೂಲಕ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳಿಗಾಗಿ ಚಿತ್ರಕಥೆಗಳನ್ನು ನಿರ್ಮಿಸಿ ಅವರಿಗೆ ನಾಯಕಿ ಮತ್ತು ನಾಯಕ ಸ್ಥಾನಮಾನವನ್ನು ನೀಡುವ ಎಂಟಿ ಅವರ ಅನನ್ಯ ಪ್ರತಿಭೆಯ ಬಗ್ಗೆ ಚರ್ಚಿಸಲಾಯಿತು.
ಗ್ರಂಥಾಲಯ ಅಧ್ಯಕ್ಷ ಕೆ. ರಘು ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಪೋಷಕ ವೈ. ಸುಕುಮಾರನ್, ಕುಂಞÂ್ಞ ರಾಮನ್, ಕಾರ್ಯಕಾರಿ ಸದಸ್ಯ ಕೆ. ಗೋಪಾಲನ್, ಪಿ. ರಾಧಾಕೃಷ್ಣನ್ ಮಾತನಾಡಿದರು. ಗ್ರಂಥಾಲಯ ಕಾರ್ಯದರ್ಶಿ ಕೆ. ಸತ್ಯನ್ ಸ್ವಾಗತಿಸಿ, ಉಪಾಧ್ಯಕ್ಷ ವಿನೋದ್ ಕುಮಾರ್ ವಂದಿಸಿದರು.