ತಿರುವನಂತಪುರಂ: ಮುಂಡಕೈ-ಚುರಲ್ ಮಲಾ ಭೂ ಕುಸಿತದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಎರಡು ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇವುಗಳನ್ನು ಉರಾಲುಂಗಲ್ ಸೊಸೈಟಿ ನಿರ್ಮಿಸಲಿದೆ. ಕಿಫ್ ಕಾನ್ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಹ್ಯಾರಿಸನ್ ಮಲಯಾಳಂನ ನೆಡುಂಪಲ ಎಸ್ಟೇಟ್ 58.5 ಹೆಕ್ಟೇರ್ ಮತ್ತು ಕಲ್ಪಟ್ಟಾ ಎಲ್ಸ್ಟೋನ್ ಎಸ್ಟೇಟ್ 48.96 ಹೆಕ್ಟೇರ್ ಭೂಮಿಯನ್ನು ಸರ್ಕಾರವಶಕ್ಕೆತೆಗದುಕೊಳ್ಲ್ಳಲಿದೆ. ನೆಡುಂಪಲ ಎಸ್ಟೇಟ್‌ನಲ್ಲಿ 10 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶಾಲೆ, ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ. ವಾಣಿಜ್ಯ ಕಟ್ಟಡಗಳು, ಅಂಗನವಾಡಿ, ಪಶು ಆಸ್ಪತ್ರೆ, ಮಾರುಕಟ್ಟೆ, ಸ್ಪೋರ್ಟ್ಸ್ ಕ್ಲಬ್, ಗ್ರಂಥಾಲಯ ಸೇರಿದಂತೆ ಸೌಲಭ್ಯಗಳೊಂದಿಗೆ ಟೌನ್ ಶಿಪ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಫಲಾನುಭವಿಗಳು ಮನೆ ಹೊಂದುತ್ತಾರೆ. ಜನವರಿ 25ರೊಳಗೆ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ನಿರ್ಮಾಣದ ಮೇಲ್ವಿಚಾರಣೆಗಾಗಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ.
ರಚನೆಯಾಗಲಿದೆ. ಮನೆಯ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದೆ. ಎರಡು ಅಂತಸ್ತಿನ ವ್ಯವಸ್ಥೆಯೊಂದಿಗೆ ನೆಲವನ್ನು ನಿರ್ಮಿಸಲಾಗುವುದೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣದ ಬಡಾವಣೆಯ ವಿಡಿಯೊ ಪ್ರದರ್ಶಿಸಲಾಯಿತು.