ಉಪ್ಪಳ: ಬಾಯಾರು ಕ್ಯಾಂಪ್ಕೋ ಸಂಸ್ಥೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಸುದೀರ್ಘ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತಿಗೊಂಡ ಈಶ್ವರ ಕೆ. ಅವರನ್ನು ಕ್ಯಾಂಪ್ಕೋ ಸಂಸ್ಥೆಯ ಪರವಾಗಿ ಶಾಲು ಹೊದೆಸಿ ಫಲ ತಾಂಬೂಲ ಸ್ಮರಣಿಕೆಗಳನ್ನು ನೀಡಿ ಬೀಳ್ಕೊಡಲಾಯಿತು.
ಕ್ಯಾಂಪ್ಕೋ ನಿರ್ದೇಶಕ ಬಾಲಕೃಷ್ಣ. ರೈ ಬಾನೊಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋದ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕರಾದ ಚಂದ್ರ ಯಂ. ಕ್ಯಾಂಪ್ಕೋ ಬಾಯಾರು ಶಾಖಾ ಪ್ರಂಬಂಧಕ ರಮೇಶ್ ವೈ,. ಕ್ಯಾಂಪ್ಕೋದ ಹಿರಿಯ ಸದಸ್ಯರುಗಳಾದ ಕೂವೆತ್ತೋಡಿ ವಿಷ್ಣು ಭಟ್, ನಟರಾಜ್ ಮಾಸ್ತರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಕ್ಯಾಂಪ್ಕೋ ಬಾಯಾರು ಶಾಖೆಯ ಸಿಬ್ಬಂದಿಗಳಾದ ಕುಮಾರ್ ಬಿ. ಸ್ವಾಗತಿಸಿ, ಲೋಕೇಶ್ ಯನ್. ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ಆರ್.ಯನ್. ವಂದಿಸಿದರು.