HEALTH TIPS

ಬಿಹಾರದಲ್ಲಿ CMಗಿಂತ ಸಚಿವರೇ ಶ್ರೀಮಂತರು: ನಿತೀಶ್‌ ಆಸ್ತಿ ₹1.64 ಕೋಟಿ

 ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು ₹1.64 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಇತ್ತೀಚಿಗೆ ಬಿಡುಗಡೆಯಾದ ಆಸ್ತಿ ವಿವರದಲ್ಲಿ ತಿಳಿದುಬಂದಿದೆ.

ಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಆಸ್ತಿಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಅದರ ಪ್ರಕಾರ 2024ರ ಡಿ.31ರವರೆಗೆ ನಿತೀಶ್‌ ಕುಮಾರ್ ಅವರ ಬಳಿ ₹21,052 ನಗದು ಮತ್ತು ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ₹60,811.56 ಹಣವಿದೆ.

ಪ್ರತಿ ವರ್ಷದ ಅಂತ್ಯಕ್ಕೆ ಎಲ್ಲಾ ಸಂಪುಟ ಸಚಿವರು ತಮ್ಮ ಆಸ್ತಿ ಮತ್ತು ಸಾಲಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಬಿಹಾರ ಸರ್ಕಾರ ಕಡ್ಡಾಯಗೊಳಿಸಿದೆ. ಆ ಪ್ರಕಾರ ಈ ಬಾರಿ ಹಂಚಿಕೊಂಡ ಮಾಹಿತಿಯಲ್ಲಿ ಮುಖ್ಯಮಂತ್ರಿ ನಿತೀಶ್‌ಗಿಂತ ಹಲವು ಸಚಿವರುಗಳೇ ಶ್ರೀಮಂತರು ಎನ್ನುವುದು ಗೊತ್ತಾಗಿದೆ.

ನಿತೀಶ್‌ ಕುಮಾರ್‌ ಅವರ ಬಳಿ ದೆಹಲಿಯಲ್ಲಿ ಒಂದು ಫ್ಲಾಟ್‌ ಸೇರಿ ಸುಮಾರು 16 ಲಕ್ಷ (₹16,97,741.56) ಮೌಲ್ಯದ ಚಿರಾಸ್ತಿ ಹಾಗೂ ₹1.48 ಕೋಟಿ ಮೌಲ್ಯದ ಸ್ಥಿರಾಸ್ತಿಯಿದ್ದು, ಒಟ್ಟು, ₹1.64 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಬಳಿ ₹6.7 ಲಕ್ಷ ನಗದು, ಪತ್ನಿ ಕುಮಾರಿ ಮಮತಾ ಬಳಿ ₹5.7 ಲಕ್ಷ ನಗದು, ₹4 ಲಕ್ಷದ ರೈಫಲ್‌ ಸೇರಿ ₹8.28 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಮತ್ತೊಬ್ಬ ಉಪಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಬಳಿ ₹2.42 ಕೋಟಿ ಸ್ಥಿರಾಸ್ತಿ ಹಾಗೂ ಅವರ ಪತ್ನಿ ಬಳಿ ₹3.32 ಕೋಟಿ ಸ್ಥಿರಾಸ್ತಿಯಿದ್ದು, ಯಾವುದೇ ನಗದು ಇಲ್ಲ. ಆದರೆ ₹77,181 ರಿವಾಲ್ವರ್ ಇರುವುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಉಳಿದಂತೆ ಎಲ್ಲಾ ಸಚಿವರು ಆಸ್ತಿ ವಿವರಗಳನ್ನು ಹಂಚಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries