ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಎಎಪಿಗೆ ಆಘಾತ ಉಂಟಾಗಿದೆ. ಇಬ್ಬರು ಕೌನ್ಸಿಲರ್‌ಗಳು ಶುಕ್ರವಾರ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ರವೀಂದರ್ ಸೋಲಂಕಿ ಹಾಗೂ ನರೇಂದರ್ ಗಿರ್ಸಾ ಎಎಪಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಸೋಲಂಕಿ ಬಪ್ರೊಲಾ ಹಾಗೂ ಗಿರ್ಸಾ ಮಂಗಲ್‌ಪುರಿ ವಾರ್ಡ್‌ನ ಎಂಸಿಡಿ ಸದಸ್ಯರು.
ಉಭಯ ಕೌನ್ಸಿಲರ್‌ಗಳು ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ ಹಾಗೂ ಪಶ್ಚಿಮ ದೆಹಲಿ ಕ್ಷೇತ್ರದ ಸಂಸದೆ ಕಮಲ್‌ಜಿತ್ ಶೆರಾವತ್ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಎರಡೂ ವಾರ್ಡ್‌ಗಳು ಶೆರಾವತ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ.
'ಈ ಇಬ್ಬರೂ ಕೌನ್ಸಿಲರ್‌ಗಳ ಎಎಪಿಯ ಸ್ಥಾಪಕ ಸದಸ್ಯರಾಗಿದ್ದವರು. ಇವರು ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಹಾಗೂ ನೀತಿಯಿಂದ ಭ್ರಮನಿರಸನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದಾರೆ' ಎಂದು ಶೆರಾವತ್ ಹೇಳಿದ್ದಾರೆ.
'ಸೋಲಂಕಿ ಹಾಗೂ ಗಿರ್ಸಾ ಅವರು ನಿಲುವು ಬದಲಿಸಿಕೊಂಡಿಲ್ಲ. ಆದರೆ ಕೇಜ್ರಿವಾಲ್ ಅವರು ಬದಲಾಗಿದ್ದರಿಂದ ಅವರು ಪಕ್ಷ ತೊರೆದಿದ್ದಾರೆ' ಎಂದು ಅವರು ಹೇಳಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5 ರಂದು ಮತದಾನ ನಡೆಯಲಿದೆ. ಫೆ. 8ಕ್ಕೆ ಮತ ಎಣಿಕೆ ನಡೆಯಲಿದೆ.