HEALTH TIPS

Facebook ಸ್ಥಾಪಕ ಝುಕರ್ಬರ್ಗ್ ಹೇಳಿಕೆಗೆ Ashwini Vaishnaw fact check; ಕೇಂದ್ರ ಸಚಿವರಿಂದ ಭರ್ಜರಿ ಕೌಂಟರ್!

ನವದೆಹಲಿ: ಯಾವುದಾದರೂ ವೈರಲ್ ಸುದ್ದಿಯನ್ನು ನೀವು ಸಾಮಾಜಿಕ ಜಾಲತಣಾಗಳಲ್ಲಿ ಹಂಚಿಕೊಂಡು ಒಂದು ವೇಳೆ ಅದು ಸುಳ್ಳು ಎಂಬುದಾದರೆ facebook ಅದರ ಸತ್ಯಾಸತ್ಯತೆ ಪರಿಶೀಲಿಸುವ ವ್ಯವಸ್ಥೆಯನ್ನು ಹೊಂದಿದೆ. ಆದರೆ ಫೇಸ್ ಬುಕ್ ಸಂಸ್ಥಾಪಕರೇ ಸುಳ್ಳು ಸುದ್ದಿಯನ್ನು ನಂಬಿದ್ದರಾ? ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತಿದೆ ಈ ಘಟನೆ

ಆಗಿದ್ದು ಇಷ್ಟು. ಕೊರೋನ ನಂತರದ ವರ್ಷಗಳಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ 2024 ರಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಅಧಿಕಾರ ಕಳೆದುಕೊಂಡವು ಎಂದು ಮಾರ್ಕ್ ಝುಕರ್ಬರ್ಗ್ ಹೇಳಿದ್ದರು.

ಈ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ fact check ಮಾಡಿದ್ದು, ಝುಕರ್ಬರ್ಗ್ ನೀಡಿರುವ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ ಎಂದು ಭರ್ಜರಿ ಕೌಂಟರ್ ನೀಡಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿರುವ ವೈಷ್ಣವ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ 2024 ರ ಸಾರ್ವತ್ರಿಕ ಚುನಾವಣೆಯನ್ನು 640 ಮಿಲಿಯನ್ (64 ಕೋಟಿ) ಕ್ಕೂ ಹೆಚ್ಚು ಮತದಾರರೊಂದಿಗೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ NDA ಯಲ್ಲಿ ನಂಬಿಕೆ ಹೊಂದಿರುವುದಾಗಿ ಭಾರತದ ಜನರು 2024 ರಲ್ಲಿ ತೀರ್ಪು ನೀಡಿದ್ದಾರೆ ಎಂದು ಅಶ್ವಿನಿ ವೈಷ್ಣವ್ ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.

"2024 ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತವು ಎಂಬ ಶ್ರೀ ಜುಕರ್‌ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ" ಎಂದು ಮಾಹಿತಿ ಮತ್ತು ಪ್ರಸಾರ ಸಚಿವರು ಗಮನಿಸಿದರು.

"800 ಮಿಲಿಯನ್‌ಗೆ ಉಚಿತ ಆಹಾರ, 2.2 ಬಿಲಿಯನ್ ಉಚಿತ ಲಸಿಕೆಗಳು ಮತ್ತು ಕೋವಿಡ್ ಸಮಯದಲ್ಲಿ ವಿಶ್ವಾದ್ಯಂತ ರಾಷ್ಟ್ರಗಳಿಗೆ ಸಹಾಯದಿಂದ ಹಿಡಿದು, ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಸುವವರೆಗೆ, ಪ್ರಧಾನಿ ಮೋದಿಯವರ ನಿರ್ಣಾಯಕ 3 ನೇ ಅವಧಿಯ ಗೆಲುವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ನಂಬಿಕೆಗೆ ಸಾಕ್ಷಿಯಾಗಿದೆ" ಎಂದು ವೈಷ್ಣವ್ ಪ್ರತಿಪಾದಿಸಿದರು.

ಮೆಟಾವನ್ನು ಟ್ಯಾಗ್ ಮಾಡಿದ ಅವರು, ಜುಕರ್‌ಬರ್ಗ್ ಅವರಿಂದಲೇ ತಪ್ಪು ಮಾಹಿತಿಯನ್ನು ನೋಡುವುದು "ನಿರಾಶಾದಾಯಕ" ಎಂದು ಕುಟುಕಿದ್ದಾರೆ. "ಸತ್ಯಗಳು ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯೋಣ" ಎಂದು ವೈಷ್ಣವ್ ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries