ಚಂಡೀಗಢ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಚಂಡೀಗಢದಲ್ಲಿ ಫೆಬ್ರುವರಿ 14ರಂದು ಸಭೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದರು.
ಇದರ ಬೆನ್ನಲ್ಲೇ, ರೈತ ನಾಯಕರು ಉಪವಾಸ ನಿರತ ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೆವಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಉದ್ದೇಶಿತ ಸಭೆಯಲ್ಲಿ ಭಾಗವಹಿಸಲು ವೈದ್ಯಕೀಯ ನೆರವು ಪಡೆದುಕೊಳ್ಳುವಂತೆ ಕೋರಿದರು.
ಡಲ್ಲೆವಾಲ್ ಅವರು ಕೈಗೊಂಡಿರುವ ಆಮರಣಾಂತ ಉಪವಾಸ ನಿರಶನ ಶನಿವಾರ 54ನೇ ದಿನ ಪೂರೈಸಿದೆ.