ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ಹಾಗೂ ತಿರುವಳ್ಳುವರ್ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ದೇಶದ ಮೊದಲ glass bridge ನ್ನು ಸಿಎಂ ಎಂಕೆ ಸ್ಟ್ಯಾಲಿನ್ ಉದ್ಘಾಟಿಸಿದರು.
ವಿಶಿಷ್ಟವಾದ ದೃಶ್ಯ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಸೇತುವೆಯು ಪಾರದರ್ಶಕ ಗಾಜಿನ ಮೇಲ್ಮೈಯನ್ನು ಹೊಂದಿದ್ದು, ಪ್ರವಾಸಿಗರಿಗೆ ಕೆಳಗಿನ ಸಮುದ್ರದ ಅತ್ಯಂತ ಸುಂದರ ನೋಟಗಳನ್ನು ಒದಗಿಸುತ್ತದೆ.
ಸಿಎಂ ಸ್ಟಾಲಿನ್ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಬಿಲ್ಲು-ಆಕಾರದ ಸೇತುವೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್ ಮೂಲಕ ಸಂಕೀರ್ಣವಾದ ವಿನ್ಯಾಸ ಮತ್ತು ವಿಹಂಗಮ ಪರಿಸರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ತಮಿಳುನಾಡಿನಲ್ಲಿ ಭಾರತದ ಮೊದಲ ಗಾಜಿನ ಸೇತುವೆಯ ಬಗ್ಗೆ
ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಂದ ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿ ಮಹೋತ್ಸವದೊಂದಿಗೆ ಡಿಸೆಂಬರ್ 30 ರಂದು ಉದ್ಘಾಟನೆಗೊಳ್ಳುವುದರೊಂದಿಗೆ ಕನ್ಯಾಕುಮಾರಿಯಲ್ಲಿ 37 ಕೋಟಿ ರೂಪಾಯಿಗಳ ಯೋಜನೆಯನ್ನು ತಮಿಳುನಾಡು ಸರ್ಕಾರವು ಕೈಗೆತ್ತಿಕೊಂಡಿತ್ತು.
ಗಾಜಿನ ಸೇತುವೆಯು 77 ಮೀಟರ್ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವನ್ನು ವ್ಯಾಪಿಸಿದೆ, ಇದು ಪ್ರದೇಶದ ಎರಡು ಪ್ರಮುಖ ಹೆಗ್ಗುರುತುಗಳಾದ ವಿವೇಕಾನಂದ ರಾಕ್ ಸ್ಮಾರಕ ಮತ್ತು 133-ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ.
ಈ ಹಿಂದೆ, ಪ್ರವಾಸಿಗರು ಕನ್ಯಾಕುಮಾರಿ ಬೋಟ್ ಜೆಟ್ಟಿಯಿಂದ ವಿವೇಕಾನಂದ ಸ್ಮಾರಕಕ್ಕೆ ಮತ್ತು ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರಯಾಣಿಸಲು ದೋಣಿ ಸೇವೆಯನ್ನು ಅವಲಂಬಿಸಬೇಕಾಗಿತ್ತು. ಗಾಜಿನ ಸೇತುವೆಯ ಉದ್ಘಾಟನೆಯೊಂದಿಗೆ, ಪ್ರವಾಸಿಗರು ಈಗ ಎರಡು ಸ್ಮಾರಕಗಳ ನಡುವೆ ಆರಾಮವಾಗಿ ನಡೆಯಬಹುದು, ಪ್ರಯಾಣದ ಸಮಯವನ್ನು ಕಡಿತಗೊಳಿಸಬಹುದು.