ಹೈದರಾಬಾದ್: ಟೆಕ್ ಲೋಕದ ದೈತ್ಯ ಗೂಗಲ್ ಈಗಾಗಲೇ ತನ್ನ ಕಬಂದು ಬಾಹುಗಳನ್ನು ವಿಶ್ವದಾದ್ಯಂತ ಪಸರಿಸಿದ್ದು, ಇನ್ನಷ್ಟು ಬೃಹದಾಕಾರವಾಗಿ ಬೆಳೆಯುತ್ತಲೇಯಿದೆ. ಇದುವರೆಗೆ ಗೂಗಲ್ ತನ್ನ ಅತಿ ದೊಡ್ಡ ಕಚೇರಿಯನ್ನು ಯು.ಎಸ್.ನಲ್ಲಿ ಹೊಂದಿತ್ತು. ಆದ್ರೀಗ ಇದು ಭಾರತಕ್ಕೆ ಆಗಮಿಸಿದೆ.
ಹೌದು, ಅಮೆರಿಕದಿಂದ ಹೊರಗೆ ಭಾರತದ ಹೈದರಾಬಾದ್‌ನಲ್ಲಿ ಗೂಗಲ್ ತನ್ನ ಅತಿದೊಡ್ಡ ಕಚೇರಿಯನ್ನು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಈ ಕೆಲಸಗಳು ಆರಂಭವಾಗಿದ್ದು ಇದು 2026 ರ ವೇಳೆಗೆ ಸಂಪೂರ್ಣ ಸಿದ್ಧವಾಗಲಿದೆ.ಆ ಮೂಲಕ ಇದು 15,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುತ್ತದೆ.
ಗೂಗಲ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಬೇಕು ಎಂಬುದು ಅದೆಷ್ಟೋ ಯುವ ಭಾರತೀಯರ ಕನಸು ಕೂಡ ಹೌದು. ಇದೀಗ ಹೈದರಾಬಾದ್ ನಲ್ಲಿ ಗೂಗಲ್ ನ ಅತಿ ದೊಡ್ಡ ಕ್ಯಾಂಪಸ್ ಸಿದ್ಧಗೊಳ್ಳುತ್ತಿದ್ದು, ಆಕಾಂಕ್ಷಿಗಳಲ್ಲಿ ಉದ್ಯೋಗದ ಭರವಸೆ ಇನ್ನಷ್ಟು ಹೆಚ್ಚಾಗಿದೆ.