HEALTH TIPS

GST: ಕೇಂದ್ರದಿಂದ ರಾಜ್ಯಗಳಿಗೆ 1.73 ಲಕ್ಷ ಕೋಟಿ ಜಿಎಸ್‌ಟಿ ಹಣ ರಿಲೀಸ್; ಈ ಬಾರಿಯೂ ಉತ್ತರ ಪ್ರದೇಶಕ್ಕೆ ಸಿಂಹಪಾಲು

ನವದೆಹಲಿ: ಜನವರಿ 10 (ಐಎಎನ್‌ಎಸ್) ಕೇಂದ್ರ ಸರ್ಕಾರವು (Central Govt) ಶುಕ್ರವಾರ 1,73,030 ಕೋಟಿ ರೂಪಾಯಿಗಳ ತೆರಿಗೆ (Tax) ಹಂಚಿಕೆಯನ್ನು ರಾಜ್ಯ ಸರ್ಕಾರಗಳಿಗೆ (state Govt) ಬಿಡುಗಡೆ ಮಾಡಿದೆ. ಡಿಸೆಂಬರ್ 2024 ರಲ್ಲಿ 89,086 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿತ್ತು.

ಇದೀಗ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಣಕ್ಕಿಂತ ದುಪ್ಪಟ್ಟು ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಹಣದಲ್ಲಿ ಕರ್ನಾಟಕಕ್ಕೆ (Karnataka) ಕೂಡ ಬಂಪರ್ ಹಣ ಸಿಕ್ಕಿದೆ.

ಉ.ಪ ಅತೀ ಹೆಚ್ಚು, ಕರ್ನಾಟಕ್ಕಕ್ಕೆ ಎಷ್ಟು ಗೊತ್ತಾ?

ಇನ್ನೂ, ಜಿಎಸ್‌ಟಿ ತೆರಿಗೆ ಹಂಚಿಕೆಯಲ್ಲಿ ಈ ಭಾರಿ ಕೂಡ ಉತ್ತರ ಪ್ರದೇಶ ರಾಜ್ಯಕ್ಕೆ 31,039.84 ಕೋಟಿ ಹಣ ನೀಡುವ ಮೂಲಕ ಈ ಭಾರಿಯೂ ಈ ರಾಜ್ಯಕ್ಕೆ ಸಿಂಹಪಾಲು ಸಿಕ್ಕಂತಾಗಿದೆ. ಇನ್ನೂ ಕರ್ನಾಟಕಕ್ಕೆ ಈ ಬಾರಿ 6,310.40 ಕೋಟಿ ಹಣ ನೀಡಲಾಗಿದೆ.

26 ರಾಜ್ಯಗಳಿಗೆ ಜಿಎಸ್‌ಟಿ ಪಾಲು ವಿತರಣೆ

ಬಂಡವಾಳ ವೆಚ್ಚವನ್ನು ವೇಗಗೊಳಿಸುವಂತೆ ಮತ್ತು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಶುಕ್ರವಾರ ಘೋಷಿಸಿದ ಜಿಎಸ್‌ಟಿ ಟ್ಯಾಕ್ಸ್ ಪ್ಯಾಕೇಜ್‌ನಲ್ಲಿ ಒಟ್ಟು 26 ರಾಜ್ಯಗಳಿಗೆ ಹಣ ವಿತರಿಸಲಾಗಿದೆ.

ಕೇರಳಕ್ಕೆ ಎಷ್ಟು ಕೋಟಿ

ಬಿಡುಗಡೆ ಮಾಡಿರುವ ನಿಧಿಯಲ್ಲಿ ಪಶ್ಚಿಮ ಬಂಗಾಳಕ್ಕೆ 13,017.06 ಕೋಟಿ, ಆಂಧ್ರಪ್ರದೇಶಕ್ಕೆ 7,002.52 ಕೋಟಿ, ಕರ್ನಾಟಕಕ್ಕೆ 6,310.40 ಕೋಟಿ, ಅಸ್ಸಾಂಗೆ 5,412.38 ಕೋಟಿ, ಛತ್ತೀಸ್‌ಗಢಕ್ಕೆ 5,895.13 ಕೋಟಿ, ಛತ್ತೀಸ್‌ಗಢಕ್ಕೆ 1,436.16 ಕೋಟಿ, ಕೇರಳಕ್ಕೆ 30 ಕೋಟಿ, ಹಿಮಾಚಲ ಪ್ರದೇಶಕ್ಕೆ 30 ಕೋಟಿ, 30 ಕೋಟಿ ರೂ. ಪಂಜಾಬ್‌ಗೆ 3,126.65 ಕೋಟಿ ಮತ್ತು ತಮಿಳುನಾಡಿಗೆ 7,057.89 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಉತ್ತರ ಪ್ರದೇಶಕ್ಕೆ ಹೆಚ್ಚಿನ ಪಾಲು

ಇತರೆ ರಾಜ್ಯಗಳ ಪೈಕಿ ಉತ್ತರ ಪ್ರದೇಶ 31,039.84 ಕೋಟಿ, ಮಹಾರಾಷ್ಟ್ರ 10,930.31 ಕೋಟಿ, ಗುಜರಾತ್ 6,017.99 ಕೋಟಿ, ಮಧ್ಯಪ್ರದೇಶ 13,582.86 ಕೋಟಿ, ಮಣಿಪುರ 1,238.9 ಕೋಟಿ, ಮೇಘಾಲಯ 1,327.13 ಕೋಟಿ ಪಡೆದುಕೊಂಡಿವೆ. ತೆರಿಗೆ ವಿಕೇಂದ್ರೀಕರಣವು ಕೇಂದ್ರ ಸರ್ಕಾರವು ಸಂಗ್ರಹಿಸುವ ತೆರಿಗೆಗಳ ನಿವ್ವಳ ಆದಾಯವನ್ನು ರಾಜ್ಯಗಳಿಗೆ ವಿತರಿಸುವ ಪ್ರಕ್ರಿಯೆಯಾಗಿದೆ.

ಕಂತುಗಳ ಆಧಾರದಲ್ಲಿ ಹಣ ವಿತರಣೆ

ಹಣಕಾಸು ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ನಿಯಮಿತ ಕಂತುಗಳಲ್ಲಿ ರಾಜ್ಯಗಳಿಗೆ ತೆರಿಗೆಗಳನ್ನು ವಿತರಿಸುತ್ತದೆ. ನಿಗಮ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಕೇಂದ್ರ ಜಿಎಸ್‌ಟಿ ಸೇರಿದಂತೆ ಎಲ್ಲಾ ತೆರಿಗೆಗಳ ಒಟ್ಟು ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ.

ಶೇ. 41ರಷ್ಟು ಜಿಎಸ್​ಟಿ ಹಣ ವಿತರಣೆ

15ನೇ ಹಣಕಾಸು ಆಯೋಗವು ಜಿಎಸ್​ಟಿ ತೆರಿಗೆ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲು ಸೂತ್ರ ನೀಡಿದೆ. ಅದರ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಶೇ. 41ರಷ್ಟು ಜಿಎಸ್​ಟಿ ಹಣವನ್ನು ರಾಜ್ಯಗಳಿಗೆ ಹಂಚಲು ಆಯೋಗ ಶಿಫಾರಸು ಮಾಡಿದೆ. ಈ ಹಣವನ್ನು ವರ್ಷಾದ್ಯಂತ 14 ಕಂತುಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries