ಮುಂಬೈ: ಡಿಸೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.7.3 ರಷ್ಟು ಏರಿಕೆಯಾಗಿದ್ದು, 1.77 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕೇಂದ್ರದ ಜಿಎಸ್‌ಟಿ ಸಂಗ್ರಹ 32,836 ಕೋಟಿ ರೂಪಾಯಿಯಾಗಿದ್ದು, ರಾಜ್ಯ ಜಿಎಸ್‌ಟಿ 40,499 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್‌ಟಿ ರೂ.47,783 ಕೋಟಿ ಮತ್ತು ಸೆಸ್ 11,471 ಕೋಟಿ ರೂ.ಗಳಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಡಿಸೆಂಬರ್‌ನಲ್ಲಿ ಶೇ.7.3 ರಷ್ಟು ಏರಿಕೆಯಾಗಿ 1.77 ಲಕ್ಷ ಕೋಟಿ ರೂ.ಗೆ ತಲುಪಿದೆ, ಕಳೇದ ವರ್ಷ ಡಿಸೆಂಬರ್ ತಿಂಗಳಿಲ್ಲಿ 1.65 ಲಕ್ಷ ಕೋಟಿ ಸಂಗ್ರಹವಾಗಿತ್ತು. ಪರಿಶೀಲನೆಯ ತಿಂಗಳ ಅವಧಿಯಲ್ಲಿ, ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಶೇ 8.4 ರಷ್ಟು ಏರಿಕೆಯಾಗಿದ್ದು, ರೂ 1.32 ಲಕ್ಷ ಕೋಟಿಗೆ ತಲುಪಿದೆ, ಆದರೆ ಆಮದು ಮೇಲಿನ ತೆರಿಗೆಯಿಂದ ಆದಾಯ ಶೇ 4 ರಷ್ಟು ಏರಿಕೆಯಾಗಿ ರೂ 44,268 ಕೋಟಿಗೆ ತಲುಪಿದೆ.
ನವೆಂಬರ್‌ನಲ್ಲಿ ಜಿಎಸ್‌ಟಿ ಮಾಪ್-ಅಪ್ 1.82 ಲಕ್ಷ ಕೋಟಿ ರೂ.ಗಳಾಗಿದ್ದು, ಶೇ.8.5ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ. 2024 ರ ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಸಂಗ್ರಹವಾಗಿದೆ.
ತಿಂಗಳ ಅವಧಿಯಲ್ಲಿ, 22,490 ಕೋಟಿ ಮೌಲ್ಯದ ಮರುಪಾವತಿಯನ್ನು ನೀಡಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 31 ಶೇಕಡಾ ಹೆಚ್ಚಳವಾಗಿದೆ. ಮರುಪಾವತಿಯನ್ನು ಸರಿಹೊಂದಿಸಿದ ನಂತರ, ನಿವ್ವಳ ಜಿಎಸ್ಟಿ ಸಂಗ್ರಹವು 3.3 ಶೇಕಡಾದಿಂದ 1.54 ಲಕ್ಷ ಕೋಟಿಗೆ ಏರಿಕೆಯಾಗಿದೆ.