ದೇಶದ ಹಲವು ಕಡೆ HMPV ವೈರಸ್ ಪತ್ತೆಯಾಗಿದೆ. ಕರ್ನಾಟಕದಲ್ಲಿ 2, ಚೆನ್ನೈಯಲ್ಲಿ 2, ಅಹಮದಾಬಾದ್‌ನಲ್ಲಿ 1 ಕೇಸ್‌ಗಳು ಪತ್ತೆಯಾಗಿದೆ. ಈ HMPV ವೈರಸ್ ಬಗ್ಗೆ ಹಲವು ಊಹಾಪೋಹಾಗಳು ಕೂಡ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ ಆದರೆ ಇದರ ಬಗ್ಗೆ ತಪ್ಪು ಮಾಹಿತಿಯನ್ನು ನಂಬಿ ಆತಂಕ ಪಡಬೇಡಿ ಎಂದು ಆರೋಗ್ಯ ಇಳಾಖೆ ಹೇಳಿದೆ, ಜನರು ಈ ವೈರಸ್ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
HMPV ಎಂದರೆ (Human Metapneumovirus), ಇದು ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಕಂಡು ಬಂದಿತ್ತು, ಮಕ್ಕಳಲ್ಲಿ ಯಾವುದೇ ದೊಡ್ಡ ಸಮಸ್ಯೆ ಕಂಡು ಬಂದಿಲ್ಲ, ಆರಾಮವಾಗಿದ್ದಾರೆ. ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಆರೋಗ್ಯ ಮಂತ್ರಿ ದಿನೇಶ್ ಗುಂಡುರಾವ್ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಕೇಸ್ 3 ತಿಂಗಳ ಮಗುವಿನಲ್ಲಿ ಕಂಡು ಬಂದಿತ್ತು, ಎರಡನೇ ಕೇಸ್ 8 ತಿಂಗಳ ಮಗುವಿನಲ್ಲಿಕಂಡು ಬಂದಿತ್ತು, ಇಬ್ಬರು ಮಕ್ಕಳು ಕೂಡ ಈಗ ಚೇತರಿಸಿಕೊಂಡಿದ್ದಾರೆ, ಆಹಾರ ಸೇವಿಸುತ್ತಿದ್ದಾರೆ, ಯಾವುದೇ ತೊಂದರೆಗಳು ಕಂಡು ಬಂದಿಲ್ಲ. ಅಲ್ಲದೆ ಈ ವೈರಸ್ ಭಾರತದಲ್ಲಿ ಹೊಸತಲ್ಲ, ಹಳೆಯ ವೈರಸ್ ಇದಾಗಿದೆ ಹಾಗಾಗಿ ಜನರು ಆತಂಕ ಪಡುವ ಅಗ್ಯತವಿಲ್ಲ ಎಂಬುವುದಾಗಿ ಹೇಳಿದ್ದಾರೆ.
HMPV ವೈರಸ್ ಬಗ್ಗೆ ನಿಗಾ ಇಡಲಾಗಿದೆ
ICMR ಜೊತೆ ಕೇಂದ್ರ ಆರೋಗ್ಯ ಇಲಾಖೆ ಭಾರತದಲ್ಲಿ ಈ ವೈರಸ್ ಹೇಗೆ ಹರಡುತ್ತಿದೆ ಎಂಬುವುದರ ಬಗ್ಗೆ ನಿಗಾ ಇಟ್ಟಿದೆ, ಅಲ್ಲದೆ ವಿಶ್ವದಲ್ಲಿಈ ವೈರಸ್ ಪ್ರಭಾವ ಹೇಗಿದೆ ಎಂಬುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡುತ್ತಿದೆ, ಚೀನಾದಲ್ಲಿ HMPV ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂಬುವುದರ ಬಗ್ಗೆ ವರದಿಗಳು ಹರಿದಾಡುತ್ತಿವೆ.
HMPV ವೈರಸ್ ತಡೆಗಟ್ಟಲು ಈ ಬಗ್ಗೆ ಜಾಗ್ರತೆವಹಿಸಲಾಗಿದೆ
ಇದೀಗ ನಮ್ಮ ರಾಜ್ಉ ಸೇರಿದಂತೆ ದೇಶದಲ್ಲಿ ಒಟ್ಟು 7 ಕೇಸ್‌ಗಳು ಪತ್ತೆಯಾಗಿದ್ದು, ಈ ವೈರಸ್ ಬಗ್ಗೆ ಜನ ಆತಂಕ ಪಡಬೇಕಾಗಿಲ್ಲ, ಆದರೆ ಮುನ್ನೆಚ್ಚರಿಕೆವಹಿಸಬೇಕಾಗಿದೆ, ಹೀಗಾಗಿ ಆರೋಗ್ಯ ಇಲಾಖೆ ಕೆಲವೊಂದ ಮುನ್ನೆಚ್ಚರಿಕೆವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆನೀಡಲಾಗಿದೆ. ಅಲ್ಲದೆ ಜನರು ಕೂಡ ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು.
ಉಸಿರಾಟದ ಸಮಸ್ಯೆಯಿಂದ ಬರುವವರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ಸೂಚನೆ ನೀಡಲಾಗಿದೆ
ಲ್ಯಾಬ್ ಟೆಸ್ಟ್ ಮಾಡಿ ಯಾವ ಬಗೆಯ ಆರೋಗ್ಯ ಸಮಸ್ಯೆ ಬಂದಿದೆ ಎಂದು ತಿಳಿಯುವವರೆಗೆ ತೀವ್ರ ಉಸಿರಾಟದ ಸಮಸ್ಯೆ ಇರುವ ರೋಗಿಯನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ವಿಧಾನದಿಂದ HMPV ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ.
ಅಗ್ಯತ ಔಷಧಗಳನ್ನು ಸ್ಟಾಕ್ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ
ಆಸ್ಪತ್ರೆಯಲ್ಲಿ ಔಷಧಗಳ ಸ್ಟಾಕ್ ಇಡುವಂತೆ ಸಲಹೆ ನೀಡಲಾಗುವುದು. ಪ್ಯಾರಾಸಿಟಮೋಲ್, antihistamines, bronchodilators, ಕೆಮ್ಮಿನ ಸಿರಪ್, ಆಕ್ಸಿಜನ್ ಸಪ್ಲೈ ಎಲ್ಲವೂ ಸ್ಟಾಕ್ ಇಡುವಂತೆ ಸೂಚನೆ ನೀಡಲಾಗಿದೆ.
HMPV ವೈರಸ್ ಲಕ್ಷಣಗಳು, ಸಾಮಾನ್ಯ-ಶೀತದ ಲಕ್ಷಣಗಳು ಒಂದೇ ರೀತಿ ಇದೆ
HMPV ವೈರಸ್ ಲಕ್ಷಣಗಳು ಸಾಮಾನ್ಯ ಶೀತ -ಕೆಮ್ಮಿನ ಲಕ್ಷಣಗಳಂತೆಯೇ ಕಂಡು ಬರುವುದು. ಈ ವೈರಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ಈ ವೈರಸ್ ದಾಳಿ ಮಾಡುವ ಸಾಧ್ಯತೆ ಹೆಚ್ಚು.
HMPV ವೈರಸ್ 2001ರಲ್ಲಿ ಕಂಡು ಬಂದಿತ್ತು
HMPV ವೈರಸ್ ಹೊಸ ವೈರಸ್ ಅಲ್ಲ, 2001ರಲ್ಲಿಯೇ ಕಂಡು ಬಂದಿತ್ತು. ಈ ವೈರಸ್ ಚಳಿಗಾಲದಲ್ಲಿ ಹಾಗೂ ವಸಂತ ಋತುವಿಲ್ಲಿ ಕಂಡು ಬರುವುದು. ಹಾಗಾಗಿ ಕೆಮ್ಮು- ಉಸಿರಾಟದ ಸಮಸ್ಯೆ ಕಂಡು ಬಂದರೆ ಆತಂಕ ಪಡಬೇಡಿ. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಕೈಗಳನ್ನು ಆಗಾಗ ತೊಳೆಯಿರಿ, ಜನರ ಗುಂಪು ಇರುವ ಕಡೆ ಓಡಾಡುವಾಗ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಮಾಸ್ಕ್ ಧರಿಸುವುದು ಸೂಕ್ತ. ಆಸ್ಪತ್ರೆಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ.