12ರಂದು ಉಪನ್ಯಾಸ ಆರಂಭಗೊಳ್ಳಲಿದೆ. ಮೊದಲ ದಿನ ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ಇರಲಿದೆ. 'ಒಂದು ದೇಶ ಒಂದು ಚುನಾವಣೆ' ವಿಷಯದ ಬಗ್ಗೆ ಜ.18ರಂದು ಉಪನ್ಯಾಸ ನಿಗದಿಯಾಗಿದೆ.
''ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಒಟ್ಟು ಏಳು ಉಪನ್ಯಾಸಗಳ ಸರಣಿ ನಡೆಯಲಿವೆ. ಜನವರಿ 18ರಂದು ಒಂದು 'ದೇಶ ಒಂದು ಚುನಾವಣೆ- ವಿಕಸಿತ ಭಾರತದ ವೇಳೆಯಲ್ಲಿ ಆರ್ಥಿಕ, ರಾಜಕೀಯ ಸುಧಾರಣೆ' ಎನ್ನುವ ವಿಷಯದ ಬಗ್ಗೆ ಭಾಷಣ ನಡೆಯಲಿದೆ'' ಎಂದು ದಿವ್ಯ ಪ್ರೇಮ ಸೇವಾ ಮಿಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕುಂಭಮೇಳ ನಡೆಯುವ ಸ್ಥಳಕ್ಕೆ ಬಂದು ಭಾಷಣ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜ. 12ರಂದು 'ಸ್ವಾಮಿ ವಿವೇಕಾನಂದ- ಸನಾತನ ಧರ್ಮದ ಜಾಗತಿಕ ದೃಷ್ಠಿ' ಎನ್ನುವ ವಿಷಯದ ಬಗ್ಗೆ ಪ್ರವಚನ ಇರಲಿದೆ.
ಜಾಗತಿಕ ಭಯೋತ್ಪಾದನೆ, ಭಾರತದ ಸಮಗ್ರತೆ ಮತ್ತು ಸವಾಲುಗಳು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಉಪನ್ಯಾಸ ಆರಂಭಕ್ಕೂ ಮುನ್ನ ಆ ಬಗ್ಗೆ ವಿಡಿಯೊ ಪ್ರದರ್ಶನ ಕೂಡ ಇರಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.