HEALTH TIPS

Mahakumbh 2025: ಕಾಶಿ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಿದ Steve Jobs ಪತ್ನಿ Laurene Powell

Top Post Ad

Click to join Samarasasudhi Official Whatsapp Group

Qries

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ 2025 ರಲ್ಲಿ ಲಾರೆನ್ ಪೊವೆಲ್ ಜಾಬ್ಸ್ ಅವರು ಭಾಗವಹಿಸಲಿದ್ದು, ಅಲ್ಲಿ ಅವರು ಜನವರಿ 29 ರವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್​ ಪತ್ನಿ ಲಾರೆನ್ ಪೊವೆಲ್ ಕುಂಭಮೇಳಕ್ಕಾಗಿ ಪ್ರಯಾಗ್​ರಾಜ್​ಗೆ ತೆರಳುವ ಮೊದಲು ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದರು. ಲಾರೆನ್ಸ್ ನಿರಂಜನಿ ಅಖಾರದ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ದೇವಸ್ಥಾನಕ್ಕೆ ಬಂದರು.

ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್ ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು. ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.

ಗುರುಗಳನ್ನು ಭೇಟಿಯಾಗಲು ಆಗಮಿಸಿರುವ ಲಾರೆನ್ ಪೊವೆಲ್

ಲಾರೆನ್ ಪೊವೆಲ್ ಅವರಿಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಲಾಗಿದೆ. ಅವರು ತನ್ನ ಗುರುಗಳನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ನಾವು ಅವರಿಗೆ ಕಮಲಾ ಎಂದು ಹೆಸರಿಟ್ಟಿದ್ದೇವೆ. ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ ಎಲ್ಲರಿಗೂ ಸ್ವಾಗತ ಎಂದು ಸ್ವಾಮಿ ಕೈಲಾಶಾನಂದ್ ಜಿ ಮಹಾರಾಜ್ ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries