ನವದೆಹಲಿ: ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಸರ್ವೀಸಸ್ (NICSI) ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದಾಗಿ ಆರ್ಥಿಕ ಇಲಾಖೆ, ವಾಣಿಜ್ಯ ಸಚಿವಾಲಯ ಹಾಗೂ ದೂರಸಂಪರ್ಕ ಇಲಾಖೆಯ ಅಂತರ್ಜಾಲ ತಾಣಗಳು ಕೆಲ ಕಾಲ ಸ್ಥಗಿತಗೊಂಡವು.
ರಾಷ್ಟ್ರ ರಾಜಧಾನಿಯ ಶಾಸ್ತ್ರಿ ಪಾರ್ಕ್ ಬಳಿ ಇರುವ ಮಾಹಿತಿ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಈ ಸಮಸ್ಯೆ ಎದುರಾಯಿತು.
ಇದರ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಸರ್ಕಾರದ ಕೆಲ ಅಂತರ್ಜಾಲ ತಾಣಗಳು ಎಂದಿನಂತೆಯೇ ಕಾರ್ಯಾಚರಣೆ ನಡೆಸಲಿವೆ ಎಂದು ಮೂಲಗಳು ಹೇಳಿವೆ.
ಸರ್ಕಾರದ ಬಹುತೇಕ ಅಂತರ್ಜಾಲ ತಾಣಗಳನ್ನು NICSI ನಿರ್ವಹಿಸುತ್ತಿದೆ. ಕೆಲ ಕ್ಷಣಗಳ ಹಿಂದೆ ಈ ತಾಣಗಳು ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿವೆ. ಘಟನೆ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಪ್ರತಿಕ್ರಿಯಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.