ಲಂಡನ್: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರು ಚಿಕಿತ್ಸೆಗಾಗಿ ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಕ್ಷ ತಿಳಿಸಿದೆ.
ಲಂಡನ್‌ನಲ್ಲಿ ಖಲೀದಾ ಅವರು ಏಳು ವರ್ಷಗಳಿಂದ ದೂರವಿದ್ದ ತಮ್ಮ ಮಗ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿದ್ದಾರೆ.
ಹೃದಯ ಸಂಬಂಧಿ ಸೇರಿ ವಿವಿಧ ರೀತಿಯ ಅನಾರೋಗ್ಯಕ್ಕೆ ಒಳಗಾಗಿರುವ ಖಲೀದಾ ಅವರು 2017ರಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಆರೋಗ್ಯ ಇನ್ನಷ್ಟು ಹದಗೆಟ್ಟ ಕಾರಣ ಸುಧಾರಿತ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ ಹೇಳಿದೆ.
ಶೇಖ್ ಹಸೀನಾ ಸರ್ಕಾರ ಕಾನೂನು ತೊಡಕುಗಳನ್ನು ಉಲ್ಲೇಖಿಸಿ ಖಲೀದಾ ಅವರಿಗೆ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಿರಲಿಲ್ಲ.
2008ರಿಂದ ಲಂಡನ್‌ನಲ್ಲಿ ನೆಲೆಸಿರುವ ಖಲೀದಾ ಪುತ್ರ ರೆಹಮಾನ್ ಕೂಡ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದಾರೆ.
ಹಸೀನಾ ಆಳ್ವಿಕೆಯಲ್ಲಿ 2018 ರಲ್ಲಿ ಖಲೀದಾಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸದಲ್ಲಿದ್ದರು. ಆದರೆ 2020 ಮಾರ್ಚ್ 25 ರಂದು, ಹಸೀನಾ ಸರ್ಕಾರ ಶಿಕ್ಷೆಯನ್ನು ಅಮಾನತುಗೊಳಿಸಿತು ಷರತ್ತುಬದ್ಧ ಬಿಡುಗಡೆಯನ್ನು ನೀಡಿತ್ತು.
ಆ ಬಳಿಕ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಶಿಕ್ಷೆಯ ಅಮಾನತು ಮತ್ತು ಬಿಡುಗಡೆಯ ಅವಧಿಯನ್ನು ವಿಸ್ತರಿಸುತ್ತಿತ್ತು. ಹೀಗಾಗಿ 2024ರವರೆಗೂ ಖಲೀದಾ ಸೆರೆವಾಸದಲ್ಲಿಯೇ ಇದ್ದರು.
2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನವಾಗಿ ಅವಾಮಿ ಲೀಗ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಯುತ್ತಿದ್ದಂತೆ ಜೈಲಿನಲ್ಲಿದ್ದ ಖಲೀದಾ ಅವರನ್ನು ಬಿಡುಗಡೆಗೊಳಿಸಲಾಗಿತ್ತು.