ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊಂದದೇ ಜಮ್ಮು ಮತ್ತು ಕಾಶ್ಮೀರ ಪರಿಪೂರ್ಣವಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುಡುಗಿದ್ದಾರೆ.
ಅಕ್ನೂರ್‌ನಲ್ಲಿ ಆಯೋಜಿಸಿದ್ದ ಸಶಸ್ತ್ರ ಪಡೆಗಳ 9ನೇ ವೇಟರನ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಗ್ರರ ತರಬೇತಿ ಕ್ಯಾಂಪ್‌ಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮುನ್ನಡೆಸಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಉಗ್ರರ ತರಬೇತಿ ಕ್ಯಾಂಪ್‌ಗಳನ್ನು ನೆರೆಯ ಪಾಕಿಸ್ತಾನ ನಾಶ ಮಾಡಬೇಕು. ಇಲ್ಲದಿದ್ದರೇ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಸಿಂಗ್ ಹೇಳಿದ್ದಾರೆ. ಈ ಕುರಿತು ದಿ ಹಿಂದೂಸ್ತಾನ್ ವೆಬ್‌ಸೈಟ್ ವರದಿ ಮಾಡಿದೆ.