ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದೆಹಲಿಯ ನ್ಯೂ ಅಶೋಕ್ ನಗರದವರೆಗಿನ 13 ಕಿ.ಮೀ ದೂರದ ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್) ಕಾರಿಡಾರ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.
ಇದೇ ವೇಳೆ ಸಾಹಿಬಾಬಾದ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಮೋದಿ ಪ್ರಯಾಣಿಸಿದರು.
ನ್ಯೂ ಅಶೋಕ್ ನಗರ ಮತ್ತು ಮೀರತ್ ಸೌತ್ ನಡುವೆ 11 ನಿಲ್ದಾಣಗಳಿವೆ. ಪ್ರಯಾಣಿಕರ ಓಡಾಟಕ್ಕೆ ಇಂದು ಸಂಜೆ 5 ರಿಂದ ಪ್ರಾರಂಭವಾಗಲಿದ್ದು, ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುತ್ತವೆ.
ಇದೇ ವೇಳೆ ₹12 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.