ವೆಲ್ಲಿಂಗ್ಟನ್: ಜಗತ್ತಿನ ಹಲವು ದೇಶಗಳಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಸಂಘರ್ಷದ ಹೊರತಾಗಿಯೂ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಹೊಸ ವರ್ಷವನ್ನು ಬರಮಾಡಿಕೊಂಡರು.
ದಕ್ಷಿಣ ಫೆಸಿಫಿಕ್ ರಾಷ್ಟ್ರಗಳು ಮೊದಲಿಗೆ ಹೊಸ ವರ್ಷವನ್ನು ಆಚರಿಸಿತು. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಗೂ 18 ತಾಸುಗಳಿಗೂ ಮುನ್ನ ಮಧ್ಯರಾತ್ರಿಯೇ ಇಲ್ಲಿ ಹೊಸ ವರ್ಷ ಸಂಭ್ರಮಿಸಿದರು.
ದೇಶದ ಪ್ರಮುಖ ನಗರವಾದ ಆಕ್ಲೆಂಡ್‌ನಲ್ಲಿ ಸಾವಿರಾರು ಮಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದಾದ ಎರಡು ತಾಸಿನ ಬಳಿಕ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಾಚರಣೆಗಳು ನಡೆದವು. ಸಿಡ್ನಿ ಬಂದರಿನಲ್ಲಿ ನಡೆಯುವ ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಬ್ರಿಟನ್‌ನ ಪಾಪ್‌ಸ್ಟಾರ್ ರಾಬ್ಬಿ ವಿಲಿಯಮ್ಸ್ ಕಾರ್ಯಕ್ರಮ ನಡೆಸಿಕೊಟ್ಟರು.
ದೇಶದ ಅತೀ ದೀರ್ಘ ರಜಾ ಕಾಲವಾದ ಜಪಾನ್‌ನಲ್ಲಿ ದೇವಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಹೊಸ ವರ್ಷ ಆಚರಿಸಲಾಯಿತು.
ಮುಂಬರುವ ವರ್ಷವೂ ಏಷ್ಯಾದ ರಾಶಿಚಕ್ರದ ಪ್ರಕಾರ, ಹಾವುಗಳ ಪುನರ್‌ಜನ್ಮ ಎಂದು ನಂಬಲಾಗಿದೆ. ಹೀಗಾಗಿ, ಜಪಾನ್‌ನ ಬಹುಪಾಲು ಮಳಿಗೆಗಳು ಜ.1ರಿಂದ ರಾಶಿಚಕ್ರದ ಆರಂಭ ಎಂದು ಪರಿಗಣಿಸಿ, ಹಾವುಗಳನ್ನು ಒಳಗೊಂಡ ವಸ್ತುಗಳ ಮಾರಾಟದಲ್ಲಿ ತೊಡಗುವುದು ವಿಶೇಷ.
ಜೆಜು ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವು ಭಾನುವಾತರ ಪತನಗೊಂಡು 179 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಾದ್ಯಂತ ಶೋಕಾಚರಿಸುತ್ತಿದ್ದು, ಹೊಸ ವರ್ಷ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.