ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ ಇದೆ. ಇನ್ಮುಂದೆ ವಾಟ್ಸಾಪ್ ಯುಪಿಐ (UPI) ಮತ್ತಷ್ಟು ಸರಳವಾಗಲಿದೆ. ಹೌದು, ಎನ್ಪಿಸಿಐ (NPCI) ಆನ್‌ಬೋರ್ಡಿಂಗ್ ಲಿಮಿಟ್ ಅನ್ನು ತೆಗೆದು ಹಾಕಿದೆ. ಈ ಮೂಲಕ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೆ ಯುಪಿಐ ಸೇವೆಗಳನ್ನು ನೀಡಲು ಪ್ಲಾಟ್‌ಫಾರ್ಮ್‌ಗೆ ಅವಕಾಶ ಮಾಡಿಕೊಟ್ಟಿದೆ. 'ವಾಟ್ಸಾಪ್ ಪೇ' (WhatsApp Pay) ಈಗ ಯುಪಿಐ ಸೇವೆಗಳನ್ನು ತನ್ನ ಸಂಪೂರ್ಣ ಬಳಕೆದಾರರಿಗೆ ವಿಸ್ತರಿಸಬಹುದು. ಇದು ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಎನ್ಪಿಸಿಐ ಈ ಹಿಂದೆ, ತನ್ನ ಯುಪಿಐ ಬಳಕೆದಾರರ ಸಂಖ್ಯೆ ಹಂತ ಹಂತವಾಗಿ ವಿಸ್ತರಿಸಲು 'ವಾಟ್ಸಾಪ್ ಪೇ'ಗೆ ಅನುಮತಿ ನೀಡಿತ್ತು. ಇದೀಗ, ವಾಟ್ಸಾಪ್ ಪೇ ಆನ್‌ಬೋರ್ಡಿಂಗ್ ಮಿತಿಯನ್ನು ಎನ್ಪಿಸಿಐ ತೆಗೆದುಹಾಕಿದೆ. ಸದ್ಯ, 5 ಕೋಟಿಗೂ ಹೆಚ್ಚು ಭಾರತೀಯ ವಾಟ್ಸಾಪ್ ಬಳಕೆದಾರರು ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ. ಈ ಹಿಂದೆ ವಾಟ್ಸಾಪ್‌ನ ಸೀಮಿತ ಬಳಕೆದಾರರು ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದರು. ಇದೀಗ, ಭಾರತದ ಡಿಜಿಟಲ್ ಪೇ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ.

ಡಿಜಿಟಲ್ ವಹಿವಾಟು ಸಂಖ್ಯೆ ಹೆಚ್ಚಳ
ವಾಟ್ಸಾಪ್‌ನ ಎಲ್ಲಾ ಬಳಕೆದಾರರು ಸುಲಭವಾಗಿ ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ. ಇದು ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಸರಳಗೊಳಿಸುತ್ತದೆ. ಏಕೆಂದರೆ ವಾಟ್ಸಾಪ್‌ನ ಇಂಟರ್ಫೇಸ್ ಈಗಾಗಲೇ ಬಳಕೆದಾರರಿಗೆ ಸರಳವಾಗಿದೆ. ಬಳಕೆದಾರರು ಸದ್ಯ ಯಾವುದೇ ಸಮಸ್ಯೆಯಿಲ್ಲದೆ ಹಣವನ್ನು ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು. ಇದು ಯುಪಿಐ ಬಳಕೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಸಂಖ್ಯೆಯು ವೇಗವಾಗಿ ಹೆಚ್ಚಳವಾಗುತ್ತದೆ.
15,547 ಕೋಟಿ ವಹಿವಾಟು
ವಾಟ್ಸಾಪ್ ಪೇ ಈಗ ಗೂಗಲ್ ಪೇ (Google Pay) ಮತ್ತು ಫೋನ್ ಪೇ (Phonepe) ನಂತಹ ದೊಡ್ಡ ಕಂಪನಿಗಳಿಗೆ ಭಾರೀ ಪೈಪೋಟಿ ನೀಡುತ್ತದೆ. ಇದು ನಗದು ರಹಿತ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ವಾಟ್ಸಾಪ್ ಮೂಲಕ ಪಾವತಿ ಮಾಡುವುದು ಮತ್ತಷ್ಟು ಸುಲಭವಾಗುತ್ತದೆ. ಇದು ಆನ್‌ಲೈನ್ ಪಾವತಿಗಳ ಬಳಕೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಜನರಲ್ಲಿ ನಗದು ರಹಿತ ವಹಿವಾಟಿನ ಅಭ್ಯಾಸ ಹೆಚ್ಚಾಗುತ್ತದೆ. ಯುಪಿಐ ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 223 ಲಕ್ಷ ಕೋಟಿ ರೂ. ಮೌಲ್ಯದ 15,547 ಕೋಟಿ ರೂ. ವಹಿವಾಟು ಸಾಧಿಸಿದೆ.