ವಾಷಿಂಗ್ಟನ್: ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಅಮೆರಿಕ ಡಾಲರ್ ಬದಲು ಅನ್ಯ ಕರೆನ್ಸಿ ಬಳಸಲು ಪ್ರಯತ್ನಿಸಿದರೆ ಆಮದಿನ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸುವ ಬೆದರಿಕೆಯನ್ನು ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ. ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಟ್ರಂಪ್ ಈ ರೀತಿ ಬರೆದುಕೊಂಡಿದ್ದಾರೆ:
'ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ ಎಂಬುದರ ಕುರಿತಾದ ನಮ್ಮ ಮೇಲ್ವಿಚಾರಣೆಯು ಮುಗಿದಿದೆ. ಅಂತರರಾಷ್ಟ್ರೀಯ ವಹಿವಟಿನಲ್ಲಿ ಬ್ರಿಕ್ಸ್ ದೇಶಗಳಿಂದ ಹೊಸ ಕರೆನ್ಸಿಯನ್ನು ರಚಿಸುವುದಿಲ್ಲ ಅಥವಾ ಡಾಲರ್ ಬದಲಿಗೆ ಅನ್ಯ ಕರೆನ್ಸಿಯತ್ತ ಮುಖ ಮಾಡುವುದಿಲ್ಲ ಎಂಬ ಬದ್ಧತೆಯನ್ನು ಬಯಸುತ್ತೇವೆ. ಅಂತಹ ಪ್ರಯತ್ನ ಮಾಡಿದರೆ, ಬ್ರಿಕ್ಸ್ ದೇಶಗಳು ವಿರುದ್ಧ ಶೇಕಡ 100ರಷ್ಟು ಸುಂಕದ ಹೇರಿಕೆಯ ಪ್ರತಿಕೂಲ ಪರಿಣಾಮ ಎದುರಿಸುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.
ಜಾಗತಿಕ ವ್ಯಾಪಾರದಲ್ಲಿ ಅಮೆರಿಕ ಡಾಲರ್ ಬಳಕೆಗೆ ಬ್ರಿಕ್ಸ್ ದೇಶಗಳು ಬದ್ಧವಾಗಿರಬೇಕು. ಇಲ್ಲವೇ, ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಅವರ ಹೇಳಿಕೆಯು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕ ಆರ್ಥಿಕತೆಗೆ ಸವಾಲೊಡ್ಡುವ ಹಣಕಾಸಿನ ಬದಲಾವಣೆಗಳ ವಿರುದ್ಧ ದೃಢವಾದ ನಿಲುವನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.