ವಾರಾಣಸಿ: ಮಹಾಶಿವರಾತ್ರಿಯಂದು ವಾರಾಣಸಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, 11.69 ಲಕ್ಷ ಜನ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ ಅವರ ನಿರ್ದೇಶನದಂತೆ ಸ್ಥಳೀಯ ಆಡಳಿತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿತ್ತು, ಭಕ್ತರಿಗೆ ದೇವರ ದರ್ಶನ ಸುಗಮವಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಜತೆಗೆ ಕಾಶಿ ವಿಶ್ವನಾಥ ದೇಗುಲದ ಆಡಳಿತ ಮಂಡಳಿಯೂ ಕೈಜೋಡಿಸಿದ್ದರಿಂದ ಲಕ್ಷಾಂತರ ಭಕ್ತರು ಸುಗಮವಾಗಿ ದರ್ಶನ ಪಡೆದರು ಎಂದು ಪ್ರಕಟಣೆ ತಿಳಿಸಿದೆ.
ಬುಧವಾರ ಬೆಳಗಿನ ಜಾವದಿಂದಲ್ಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಜಲಾಭಿಷೇಕ ಕೈಗೊಳ್ಳುವ ಮೂಲಕ ಭಕ್ತರು ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶಿವರಾತ್ರಿ ಪ್ರಯುಕ್ತ ವಿಶ್ವನಾಥ ದೇಗುಲ ಮತ್ತು ಗಂಗಾ ಘಾಟ್‌ಗಳ ಮೇಲೆ ಹೆಲಿಕಾಪ್ಟರ್‌ನಲ್ಲಿ ಪುಷ್ಪ ಮಳೆ ಸುರಿಸಲಾಗಿತ್ತು ಎಂದು ಪ್ರಕಟಣೆ ಮಾಹಿತಿ ನೀಡಿದೆ.