ಮೀರತ್: ಇಟಲಿಯ ಮಿಲಾನ್ ನಗರದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಬರೋಬ್ಬರಿ 125 ಕೆ.ಜಿ ತೂಕವನ್ನು ಹಲ್ಲಿನಿಂದ ಎತ್ತುವ ಮೂಲಕ ಮೀರತ್‌ನ ಯೋಗಪಟು ವಿಕಾಸ್ ಸ್ವಾಮಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫೆ.14ರಂದು ಈ ಸ್ಪರ್ಧೆ ನಡೆದಿದೆ. ಸ್ವಾಮಿ ಅವರು 35.57 ಸೆಕೆಂಡ್‌ಗಳಲ್ಲಿ ತಮ್ಮ ಹಲ್ಲಿನಿಂದ 125 ಕೆ.ಜಿ ಭಾರವನ್ನು ಎತ್ತಿ ಹಿಡಿದಿದ್ದಾರೆ.
ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 2023ರಲ್ಲಿ ಸ್ವಾಮಿ ಅವರು 'ಇಂಡಿಯಾಸ್ ಗಾಟ್ ಟಾಲೆಂಟ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲ್ಲಿನ ಮೂಲಕ 80 ಕೆ.ಜಿ ತೂಕವನ್ನು ಎತ್ತಿದ್ದರು.
'ಸ್ಪರ್ಧೆ ಬಹಳ ಕಠಿಣವಾಗಿತ್ತು. ಮೊದಲ ಪ್ರಯತ್ನದಲ್ಲಿ 25 ಸೆಕೆಂಡ್‌ಗಳ ಕಾಲ ಮಾತ್ರ ಭಾರವನ್ನು ಎತ್ತಲು ಸಾಧ್ಯವಾಗಿತ್ತು, ಆದರೆ ಎರಡನೇ ಪ್ರಯತ್ನದಲ್ಲಿ 35.57 ಸೆಕೆಂಡ್‌ಗಳ ಕಾಲ ಎತ್ತಲು ಸಾಧ್ಯವಾಯಿತು' ಎಂದು ಸ್ವಾಮಿ ಹೇಳಿದ್ದಾರೆ.
ಸ್ವಾಮಿ ಅವರು ದಾಖಲೆ ನಿರ್ಮಿಸುತ್ತಿದ್ದಂತೆ ಅವರ ಸ್ವಗ್ರಾಮದಲ್ಲಿ ಜನರು ಸಂಭ್ರಮಿಸಿದ್ದಾರೆ.