ನವದೆಹಲಿ: ಅಕ್ರಮವಾಗಿ ನೆಲಸಿದ್ದಾರೆ ಎಂಬ ಕಾರಣಕ್ಕೆ ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 12 ಮಂದಿ ಭಾರತೀಯರು ಭಾನುವಾರ ಇಲ್ಲಿ ಬಂದಿಳಿದರು.
12 ಜನರನ್ನು ಅಮೆರಿಕ, ಪನಾಮಾಕ್ಕೆ ಗಡೀಪಾರು ಮಾಡಿತ್ತು. ಅಲ್ಲಿಂದ ಇವರನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಇವರನ್ನು ಹೊತ್ತ ವಿಮಾನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿಯಿತು.
ಇವರಲ್ಲಿ ನಾಲ್ವರು ಪಂಜಾಬ್‌ನವರು.
ಇದು, ಅಮೆರಿಕ ಗಡೀಪಾರು ಮಾಡಿದ ಮೇಲೆ, ಪನಾಮಾದಿಂದ ವಾಪಸಾದ ಭಾರತೀಯರ ಮೊದಲ ತಂಡವಾಗಿದೆ.
ಅಕ್ರಮವಾಗಿ ನೆಲಸಿದ್ದ ಕಾರಣಕ್ಕಾಗಿ, ಈ 12 ಜನರನ್ನು ಸೇರಿ ಅಮೆರಿಕ ಈ ವರೆಗೆ 300ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ವಾಪಸ್ ಕಳುಹಿಸಿದೆ.