ಢಾಕಾ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು ಮಾರ್ಚ್ 13ರಿಂದ 16ರವರೆಗೆ ಢಾಕಾಗೆ ಭೇಟಿ ನೀಡಲಿದ್ದು, ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮ್ಯಾನ್ಮಾರ್‌ನಿಂದ ಬಲವಂತವಾಗಿ ಸ್ಥಳಾಂತರಗೊಂಡಿರುವ ರೋಹಿಂಗ್ಯಾಗಳಿಗೆ ಆತಿಥ್ಯ ನೀಡುತ್ತಿರುವ ಬಾಂಗ್ಲಾದೇಶಕ್ಕೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಸಿಗುವಂತೆ ಮಾಡುವ ಪ್ರಯತ್ನವನ್ನು ವಿಶ್ವಸಂಸ್ಥೆಯು ಮುಂದುವರಿಸಲಿದೆ ಎಂದು ಗುಟೆರಸ್ ಹೇಳಿದ್ದಾರೆ.
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರು ಗುಟೆರಸ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಮಾಧ್ಯಮವೊಂದು ಬುಧವಾರ ವರದಿ ಮಾಡಿದೆ.