ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಎರಡು ಪ್ರಾಣಿ ಸಂಗ್ರಹಾಲಯಗಳಲ್ಲಿ ಕನಿಷ್ಠ 15 ಹಕ್ಕಿಗಳು ಹಕ್ಕಿಜ್ವರದಿಂದ ಮೃತಪಟ್ಟಿವೆ ಎಂದು ಮೃಗಾಲಯ ನಿರ್ವಹಿಸುವ ಸಂಸ್ಥೆ ತಿಳಿಸಿದೆ.
ಕ್ವೀನ್ಸ್ ಮೃಗಾಲಯದಲ್ಲಿ ಮೂರು ಬಾತುಕೋಳಿಗಳು ಸೋಂಕಿನಿಂದ ಮೃತಪಟ್ಟಿವೆ. ಬ್ರಾನ್ಕ್ಸ್ ಮೃಗಾಲಯದಲ್ಲಿ ಮೃತಪಟ್ಟ ಮೂರು ಬಾತುಕೋಳಿಗಳು ಮತ್ತು ಒಂಬತ್ತು ಪಕ್ಷಿಗಳ ಕಳೇಬರಗಳ ಪರೀಕ್ಷೆ ಬಾಕಿ ಇದೆ ಎಂದು ವನ್ಯಜೀವಿ ಸಂರಕ್ಷಣಾ ಸೊಸೈಟಿ ತಿಳಿಸಿದೆ.
'ಮುಂಜಾಗ್ರತಾ ಕ್ರಮವಾಗಿ ದುರ್ಬಲ ಹಕ್ಕಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ' ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.