ನವದೆಹಲಿ: ವೀಸಾ ಅವಧಿ ಮುಗಿದ ಬಳಿಕವೂ ದೆಹಲಿಯ ದ್ವಾರಕಾದಲ್ಲಿ ಅಕ್ರಮ ವಾಸ ಆರೋಪದ ಮೇಲೆ 16 ವಿದೇಶಿ ಪ್ರಜೆಗಳನ್ನು ಪೊಲೀಸರು ಗಡೀಪಾರು ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಐವರು, ನೈಜೀರಿಯಾದ 9, ಗಿನಿಯಾದ ಮತ್ತು ಉಜ್ಬೇಕಿಸ್ತಾನದ ತಲಾ ಒಬ್ಬರನ್ನು ಗಡೀಪಾರು ಮಾಡಲಾಗಿದೆ.
ಇದಕ್ಕೂ ಮೊದಲು ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.
ಗಡೀಪಾರುಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದು ಬಾಂಗ್ಲಾದೇಶಿ ಕುಟುಂಬವೂ ಸೇರಿದೆ ಎಂದು ಅವರು ಹೇಳಿದ್ದಾರೆ.