ಮಲಪ್ಪುರಂ: ಮಲಪ್ಪುರಂನ ವೆಂಗಾರ ಬಳಿ ಮದರಸಾ ಶಿಕ್ಷಕನನ್ನು ಕಡಿದು ಕೊಲೆ ಮಾಡಲು ಯತ್ನಿಸಲಾಗಿದೆ. 28 ವರ್ಷದ ಸುಹೈಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. .
ಘಟನೆಯ ನಂತರ, 18 ವರ್ಷದ ರಶೀದ್ ಪೋಲೀಸರಿಗೆ ಶರಣಾಗಿದ್ದಾನೆ. ಪ್ರೇಮ ವಿವಾದವೇ ಈ ದಾಳಿಗೆ ಕಾರಣ ಎಂದು ಪೋಲೀಸರು ಶಂಕಿಸಿದ್ದಾರೆ.
ಆದರೆ, ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಸುಹೈಬ್, ರಶೀದ್ ಬಗ್ಗೆ ತನಗೆ ಯಾವುದೇ ಹಿಂದಿನ ಪರಿಚಯವಿಲ್ಲ ಮತ್ತು ಅವನನ್ನು ಎಂದಿಗೂ ಭೇಟಿ ಮಾಡಿಲ್ಲ ಎಂದು ಹೇಳುತ್ತಾರೆ. ಸುಹೈಬ್ ನಿವಾಸದ ಬಳಿ ಈ ದಾಳಿ ನಡೆದಿದೆ.
ಮೊನ್ನೆ ರಾತ್ರಿ 9 ಗಂಟೆ ಸುಮಾರಿಗೆ ರಶೀದ್ ಸುಹೈಬ್ ನಿವಾಸದ ಬಳಿ ಬಂದು ಸುಮಾರು ಒಂದು ಗಂಟೆ ಸುಹೈಬ್ ಗಾಗಿ ಕಾಯುತ್ತಿದ್ದ. ಸುಹೈಬ್ ಸ್ಕೂಟರ್‍ನಲ್ಲಿ ಬರುತ್ತಿರುವುದನ್ನು ನೋಡಿದ ರಶೀದ್, ಇನ್ನೊಂದು ಸ್ಕೂಟರ್‍ನಲ್ಲಿ ಸುಹೈಬ್‍ನನ್ನು ಹಿಂಬಾಲಿಸಿ ದಾಳಿ ನಡೆಸಿದ. ದೇಹ ಮತ್ತು ಕಾಲುಗಳ ಮೇಲೆ ಸುಮಾರು ಏಳು ಗಾಯಗಳಾಗಿವೆ.
ದಾಳಿಯ ನಂತರ ರಶೀದ್ ಪರಾರಿಯಾಗಿದ್ದ. ನಂತರ, ನಿನ್ನೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವೆಂಗಾರ ಪೋಲೀಸ್ ಠಾಣೆಯಲ್ಲಿ ಶರಣಾದ. ಪೋಷಕರೊಂದಿಗೆ ಅಬುಧಾಬಿಯಲ್ಲಿ ವಾಸಿಸುತ್ತಿದ್ದ ರಶೀದ್, ಪ್ಲಸ್ ಟು ಓದಲು ಕೇರಳಕ್ಕೆ ಬಂದಿದ್ದನು.