ಮುಳ್ಳೇರಿಯ: ಮುಳ್ಳೇರಿಯ ಸಮೀಪದ ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಮಾ. 1ರಿಂದ 6ರ ತನಕ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಾದಗಳೊಂದಿಗೆ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ ತಿಳಿಸಿದರು.
ಇದರ ಪೂರ್ವಭಾವಿಯಾಗಿ ಫೆ.27 ರಂದು ಕುಂಟಾರು ಕ್ಷೇತ್ರದಲ್ಲಿ ಪೂಜಿಸುತ್ತಿರುವ ಈ ಕ್ಷೇತ್ರದ ಬಲಿಬಿಂಬವನ್ನು ತಾಂತ್ರಿಕ ವಿಧಿ ಪ್ರಕಾರ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಿಂದ ಶೋಭಾಯಾತ್ರೆಯೊಂದಿಗೆ ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ತಂದು ಬಲಿ ಬಿಂಬದಿಂದ ಚೈತನ್ಯವನ್ನು ವಿಗ್ರಹಕ್ಕೆ ಸೇರಿಸುವ ಮಹತ್ತರವಾದ ಪುಣ್ಯ ಕಾರ್ಯ ನಡೆಯಿತು.
ಮಾ.1ರಂದು ಬೆಳಗ್ಗೆ 6.45ಕ್ಕೆ ನಂದಗೋಕುಲದಲ್ಲಿ ದೀಪ ಪ್ರಜ್ವಲನೆ, ವಿವಿಧ ತಂಡಗಳಿಂದ ಭಜನೆ, 9ಕ್ಕೆ ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 11.45ಕ್ಕೆ ಉಗ್ರಾಣ ಮುಹೂರ್ತ, ಸಂಜೆ 4.30ಕ್ಕೆ ಜರಗುವ ಧಾರ್ಮಿಕ ಸಭೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡುವರು. ಸಾಂಸ್ಕøತಿಕ ಕಾರ್ಯಕ್ರಮವನ್ನು ಮಲೆಯಾಳ ಧಾರಾವಾಹಿ ನಟ ಸಾಜನ್ ಸೂರ್ಯ ಉದ್ಘಾಟಿಸುವರು. ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಮತ್ತಿತರರು ಉಪಸ್ಥಿತರಿರುವರು. ಸಂಜೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮ, 6.30ರಿಂದ ನೃತ್ಯ ವೈವಿಧ್ಯ, ರಾತ್ರಿ 8ರಿಂದ ಕೈಕೊಟ್ಟು ಕಳಿ ಸಹಿತ ವಿವಿಧ ವಿವಿಧ ಸಾಂಸ್ಕೃತಿಕ ಸಾಂಸ್ಕೃ ಕಾರ್ಯಕ್ರಮ ಜರಗಲಿದೆ.
ಮಾ.2ರಂದು ಬೆಳಗ್ಗೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮ, 6.30ರಿಂದ ವಿವಿಧ ತಂಡಗಳಿಂದ ಭಜನೆ, 10 ಗಂಟೆಗೆ ಭಕ್ತಿ ಸಂಗೀತ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6.30ಕ್ಕೆ ನೃತ್ಯ ಸಂಭ್ರಮ, ಕುಣಿತ ಭಜನೆ, ರಾತ್ರಿ 9ರಿಂದ ಭಕ್ತಿ ಪ್ರದಾನ ತುಳು ನಾಟಕ, ಮಾ.3ರಂದು ಬೆಳಗ್ಗೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮ, ಭಜನೆ, 11ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಗೋವಿಂದರಾಜ್ ಕುತ್ತಿಕೋಲು ಧಾರ್ಮಿಕ ಉಪನ್ಯಾಸ ನೀಡುವರು. ವಿವಿಧ ವಲಯಗಳ ಗಣ್ಯರು ಪಾಲ್ಗೊಳ್ಳುವರು. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7.30ಕ್ಕೆ ಸಮೂಹ ನೃತ್ಯ, ನೃತ್ಯ ವೈವಿಧ್ಯ, ಭಕ್ತಿಗಾನ ಮೇಳ ನಡೆಯಲಿದೆ.
ಮಾ.4ರಂದು ಬೆಳಗ್ಗೆ 6ರಿಂದ ವಿವಿಧ ವೈದಿಕ ಕಾರ್ಯಕ್ರಮ, ಭಜನೆ, ದಾಸ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅಪರಾಹ್ನ 2.308 2.30ರಿಂದ ಗಾನವೈಭವ, ಸಂಜೆ 6ರಿಂದ ನೃತ್ಯ ಕಾರ್ಯಕ್ರಮ, ಕುಣಿತ ಭಜನೆ, ರಾತ್ರಿ 8ರಿಂದ ಅಕ್ಷಯ ಕಲಾ ವೈಭವ, ಮಾ.5ರಂದು ಬೆಳಗ್ಗೆ 6ರಿಂದ ವೈದಿಕ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ, 11ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿ ಉದ್ಘಾಟಿಸಿ ಆಶೀರ್ವಚನ ನೀಡುವರು. ದಿಶಾ ಚೈತನ್ಯ ಧಾರ್ಮಿಕ ಉಪನ್ಯಾಸ ನೀಡುವರು. ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಅಪರಾಹ್ನ 2.30ರಿಂದ ಭಕ್ತಿ ಸಂಗೀತ ಸಂಭ್ರಮ, ಸಂಜೆ 6ರಿಂದ ಯಕ್ಷಗಾನ ಬಯಲಾಟ, 6.30ರಿಂದ ಕುಣಿತ ಭಜನೆ ನೆರವೇರಲಿದೆ.
ಮಾ.6ರಂದು ಬೆಳಗ್ಗೆ 5ರಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿμÁ್ಠಪಾಣಿ, 7.37ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿμÉ್ಠ ಬ್ರಹ್ಮಕಲಶಾಭಿμÉೀಕ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ 12ರಿಂದ ಹರಿಕಥಾ ಸತ್ಸಂಗ, ಅಪರಾಹ್ನ 2.30ರಿಂದ ಮ್ಯಾಜಿಕ್ ಶೋ, ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡುವರು. ವಿವಿಧ ವಲಯಗಳ ಗಣ್ಯರು ಶುಭ ಹಾರೈಸುವರು. 6.30ಕ್ಕೆ ತಾಯಂಬಕ, ರಾತ್ರಿ 7ರಿಂದ ನೃತ್ಯ ವೈವಿಧ್ಯ, 7.30ರಿಂದ ರಂಗಪೂಜೆ, ಶ್ರೀ ಭೂತ ಬಲಿ, ವಿಶೇಷ ಬೆಡಿಸೇವೆ, ದರ್ಶನ ಬಲಿ, ರಾಜಾಂಗಣ ಪ್ರಸಾದ, 8.30ಕ್ಕೆ ಭಕ್ತಿಗಾನ ಮೇಳ, ಮೆಗಾ ತಿರುವಾದಿರ ನೃತ್ಯ, ಮಾ.7ರಂದು ಬೆಳಗ್ಗೆ 11ರಿಂದ ಶ್ರೀ ಧೂಮಾವತಿ ದೈವದ ತಂಬಿಲ, ಮಧ್ಯಾಹ್ನ 12ಕ್ಕೆ ಸಂಪೆÇ್ರಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.