HEALTH TIPS

ಒಡಿಶಾ | ಕಳ್ಳತನದ ಆರೋಪಿಗೆ ಜಾಮೀನು: 200 ಗಿಡ ನೆಡುವ ಷರತ್ತು ಹಾಕಿದ ಕೋರ್ಟ್‌

ಕಟಕ್‌: ಕಳ್ಳತನ ಆರೋಪ ಹೊತ್ತ ವ್ಯಕ್ತಿಯೊಬ್ಬನಿಗೆ ಆತನ ಗ್ರಾಮದ ಸುತ್ತ 200 ಸಸಿಗಳನ್ನು ನೆಟ್ಟು ಅವುಗಳನ್ನು ಎರಡು ವರ್ಷಗಳ ಕಾಲ ಪೋಷಿಸಬೇಕು ಎನ್ನುವ ಷರತ್ತಿನೊಂದಿಗೆ ಒಡಿಶಾ ಹೈಕೋರ್ಟ್‌ ಜಾಮೀನು ನೀಡಿದೆ.

ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಲು ಹಾಕಬಹುದಾದ ಷರತ್ತುಗಳಲ್ಲೊಂದು ಗಿಡ ನೆಡಲು ನಿರ್ದೇಶಿಸುವುದು.

2024ರ ಡಿ. 25ರಂದು ಕಟಕ್‌ ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಯೊಂದರ ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಕನಿಷ್ಠ ಆರು ವಿದ್ಯುತ್ ಕಂಬಗಳನ್ನು ಕದ್ದ ಆರೋಪದ ಮೇಲೆ ಕೋಲಬಿರಾ ಠಾಣೆಯ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು.

ಈತನ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಸ್. ಕೆ. ಪಾಣಿಗ್ರಾಹಿ ಸೋಮವಾರ ಷರತ್ತಿನ ಮೇಲೆ ಜಾಮಿನು ಮಂಜೂರು ಮಾಡಿದ್ದಾರೆ.

ಅಲ್ಲದೆ, ಪ್ರತಿ ಹದಿನೈದು ದಿನಗಳಿಗೊಮ್ಮೆ ಆರೋಪಿ ಪೊಲೀಸರ ಮುಂದೆ ಹಾಜರಾಗಬೇಕು, ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಸಾಕ್ಷ್ಯಗಳನ್ನು ನಾಶಪಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಆರೋಪಿಯು ಸ್ಥಳೀಯ ಮಾವು, ಬೇವು, ಹುಣಸೆ ಸೇರಿದಂತೆ 200 ಗಿಡಗಳನ್ನು ನೆಡಬೇಕು. ಆತನ ಹಳ್ಳಿಯ ಸುತ್ತಲಿನ ಸರ್ಕಾರಿ, ಸಮುದಾಯಕ್ಕೆ ಸೇರಿದ ಜಾಗ ಅಥವಾ ಖಾಸಗಿ ಜಾಗದಲ್ಲಿ ಗಿಡಗಳನ್ನು ನೆಡಬಹುದು ಎಂದು ಕೋರ್ಟ್‌ ನಿರ್ದೇಶಿಸಿದೆ. ಸ್ಥಳೀಯ ಪೊಲೀಸರು, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆರೋಪಿಗೆ ಸಲಹೆ ನೀಡುವಂತೆ ಆದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries