ಜಪಾನ್‌ನ (Japan Papulation) ಜನಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ (City) ಜನರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಗ್ರಾಮೀಣ (Rural Area) ಪ್ರದೇಶಗಳಲ್ಲಿ ಈಗಾಗಲೇ ಜನಸಂಖ್ಯೆ ಇಳಿಕೆಯ ಸಮಸ್ಯೆಯನ್ನು ಅನುಭವಿಸುತ್ತಿವೆ.
ಇದೀಗ ಅದೇ ದುಸ್ಥಿತಿಯನ್ನು ನಗರ ಪ್ರದೇಶಗಳು ಅನುಭವಿಸಲಿವೆ ಎಂದು ವರದಿಯಾಗಿದೆ. ಈ ನಡುವೆ2035 ರ ವೇಳೆಗೆ ಜಪಾನ್ ಜನರಿಲ್ಲದೆ ಬಿಕೋ ಎನ್ನಲಿದೆ ಎಂದು ವಿಶ್ಲೇಷಕ ಮಸಾಶಿ ಕವಾಯಿ (Masashi Kawai) ವರದಿ ಮಾಡಿದ್ದಾರೆ.
ಜನಸಂಖ್ಯೆ ಕುಸಿಯುತ್ತಿರುವ ನಗರಗಳು
ಫ್ಯೂಚರ್ ಅಟ್ಲಾಸ್: ವಾಟ್ ಹ್ಯಾಪನ್ಸ್ ಇನ್ ಜಪಾನ್ ವಿತ್ ಎ ಡಿಕ್ಲೈನಿಂಗ್ ಪಾಪ್ಯುಲೇಷನ್ ಎಂಬ ಪುಸ್ತಕದಲ್ಲಿ ಮಸಾಶಿ, ಜಪಾನ್‌ನ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ತಿಳಿಸಿದ್ದಾರೆ. ದೇಶದ ಪ್ರಮುಖ ನಗರಗಳಾದ ಕಿಟಾಕ್ಯುಶು, ಕೋಬ್, ಕ್ಯೋಟೋ ಮತ್ತು ಒಸಾಕಾ 2020 ರಲ್ಲಿಯೇ ನಿವಾಸಿಗಳನ್ನು ಕಳೆದುಕೊಳ್ಳಲಾರಂಭಿಸಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ತೀವ್ರವಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.
2024 ರಲ್ಲಿ ಪಟ್ಟಣಗಳಾದ ಸೆಂಡೈ, ಯೊಕೊಹಾಮಾ ಮತ್ತು ಕುಮಾಮೊಟೊ ಜನಸಂಖ್ಯಾ ಇಳಿಮುಖವನ್ನು ಅನುಸರಿಸಲಿದ್ದು 2025 ರಲ್ಲಿ ನಗೋಯಾ, ಸಪ್ಪೊರೊ, ಹಿರೋಷಿಮಾ ಮತ್ತು ಒಕಾಯಾಮಾ ನಗರಗಳಲ್ಲಿ ಜನಸಂಖ್ಯೆ ಕುಸಿತ ಉಂಟಾಗಲಿದೆ ಎಂದು ಉಲ್ಲೇಖಿಸಿದ್ದಾರೆ. ಪ್ರಸ್ತುತ ಅದೇ ಸ್ಥಿತಿಯನ್ನು ಜಪಾನ್‌ನ ನಗರಗಳು ಕಾಣುತ್ತಿವೆ ಎಂದು ಮಸಾಶಿ ತಿಳಿಸಿದ್ದಾರೆ.
ಹಿರಿಯ ನಿವಾಸಿಗಳ ಸಮಸ್ಯೆ
ನಗರಗಳು ತಮ್ಮಲ್ಲಿನ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಡುತ್ತಿವೆ, ಇದರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಜನರನ್ನು ಆಕರ್ಷಿಸುವ ಮೂಲಕ ಜನಸಂಖ್ಯೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ. ಆದರೆ ಇದೆಲ್ಲಾ ತಾತ್ಕಾಲಿಕ, ಏಕೆಂದರೆ ಮುಂದಿನ ದಶಕಗಳಲ್ಲಿ ಈ ವಲಸೆ ಕಡಿಮೆಯಾಗಲಿದೆ ಎಂದು ಮಸಾಶಿ ಎಚ್ಚರಿಸಿದ್ದಾರೆ. ಇನ್ನು ಜಪಾನ್‌ನ ಹಿರಿಯ ತಲೆಮಾರು ಇನ್ನಷ್ಟು ಸವಾಲುಗಳನ್ನು ಮುಂದಿಡಲಿವೆ ಎಂದು ಹೇಳಿದ್ದಾರೆ.
2035 ರ ವೇಳೆಗೆ ಕೋಬೆ (34.8%), ಸಪ್ಪೊರೊ, ಶಿಜುವೊಕಾ ಮತ್ತು ಕಿಟಾಕ್ಯುಶು (34.6%) ನಂತಹ ನಗರಗಳಲ್ಲಿ ಮೂರನೇ ಒಂದು ಭಾಗದಷ್ಟು ನಿವಾಸಿಗಳು ವೃದ್ಧರಾಗಿರುತ್ತಾರೆ ಎಂದಿದ್ದಾರೆ. ಯೊಕೊಹಾಮಾದಲ್ಲಿ, ಜೂನ್ 2024 ರ ಅಂದಾಜಿನ ಪ್ರಕಾರ, ಅದರ 3.7 ಮಿಲಿಯನ್ ನಿವಾಸಿಗಳಲ್ಲಿ ಸುಮಾರು 30% ರಷ್ಟು ಜನರು ಈಗಾಗಲೇ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಹಾಗಾಗಿ ಕವಾಯಿ ಈ ನಗರವನ್ನು ವೃದ್ಧರಿಗೆ ಗೊತ್ತುಪಡಿಸಿದ ನಗರ ಎಂದು ಕರೆದಿದ್ದಾರೆ.
ವಲಸೆಯೇ ಪ್ರಮುಖ ಕಾರಣ
ನಗರ ಯೋಜನಾ ತಜ್ಞ ಮತ್ತು ಮೀಜಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಿರೂ ಇಚಿಕಾವಾ, ಕವಾಯಿ ಸೂಚಿಸಿರುವ ಅಂಶಗಳನ್ನು ನಿಜವೆಂದು ಒಪ್ಪಿಕೊಂಡಿದ್ದು, ಜಪಾನ್‌ನ ಇಳಿಮುಖವಾಗುತ್ತಿರುವ ಜನಸಂಖ್ಯೆಗೆ ವಲಸೆ ಪ್ರಮುಖ ಕಾರಣ ಎಂದಿದ್ದಾರೆ.
ಇಚಿಕಾವಾ ಹೇಳುವಂತೆ ವಿದೇಶಿ ನಿವಾಸಿಗಳ ಹೆಚ್ಚಳವೇ ದೇಶದ ಒಟ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿರುವ ಅತಿದೊಡ್ಡ ಅಂಶ ಎಂದಿದ್ದಾರೆ. ಇಂತಹದ್ದು ಇನ್ನು ಮುಂದೆ ನಡೆಯಲಿದೆ ಎಂದು ಇಚಿಕಾವಾ ಹೇಳಿದ್ದು ಇದರ ಬಗ್ಗೆ ಮಾತನಾಡಲು ಜಪಾನಿಯರು ಸಿದ್ಧರಿಲ್ಲ, ಆದರೆ ಇದುವೇ ಅಂಶ ಜನಸಂಖ್ಯೆಯನ್ನು ಕುಗ್ಗಿಸಲಿದೆ ಎಂದಿದ್ದಾರೆ.
ವಿದೇಶಿಗರ ಸಂಖ್ಯೆ ಹೆಚ್ಚುತ್ತಿದೆ
ಕೈಗಾರಿಕಾ ವಲಯಗಳಲ್ಲಿ ಕಾರ್ಮಿಕರ ಕೊರತೆ ಇದ್ದರೂ ದೊಡ್ಡ ಪ್ರಮಾಣದ ವಲಸೆಗೆ ತೀವ್ರ ಪ್ರತಿರೋಧವಿದೆ. ಯುರೋಪ್‌ನಲ್ಲಿ ವಲಸಿಗರನ್ನು ಒಳಗೊಂಡ ಹಿಂಸಾಚಾರದ ಘಟನೆಗಳ ಬಗ್ಗೆ ಜಪಾನ್ ಮಾಧ್ಯಮಗಳು ವರದಿ ಮಾಡುತ್ತಿದ್ದು ಇದರಿಂದ ಸಾರ್ವಜನಿಕ ಸಂದೇಹ ಬಲವಾಗುತ್ತಿವೆ.
2024 ರ ಸರಕಾರಿ ಅಂಕಿ ಅಂಶಗಳ ಪ್ರಕಾರ ಟೋಕಿಯೊಗೆ ಆಗಮಿಸಿರುವ 79,285 ಜನರ ವಲಸೆಯನ್ನು ಸೂಚಿಸುತ್ತದೆ, ಈ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದಾಗ 11,000 ಹೆಚ್ಚಾಗಿದೆ.
ಆರು ಪ್ರಾಂತ್ಯಗಳಾದ ಕನಗಾವಾ, ಸೈತಾಮಾ, ಒಸಾಕಾ, ಚಿಬಾ, ಫುಕುವೋಕಾ ಮತ್ತು ಯಮನಾಶಿ ಮಾತ್ರ ಜನಸಂಖ್ಯಾ ಬೆಳವಣಿಗೆಯನ್ನು ದಾಖಲಿಸಿವೆ. ಈ ನಗರಗಳು ಗ್ರಾಮೀಣ ಪ್ರದೇಶಗಳಿಂದ ಜನರನ್ನು ಆಕರ್ಷಿಸುತ್ತಲೇ ಇದ್ದು ಆದರೆ ಹೆಚ್ಚಿನ ವಿದೇಶಿಗರು ಬಂದು ಇಲ್ಲಿ ನೆಲೆಸಿದ್ದಾರೆ ಎಂದು ಇಚಿಕಾವಾ ತಿಳಿಸಿದ್ದಾರೆ.
ಸಪ್ಪೊರೊ, ಫುಕುವೋಕಾ, ಕವಾಸಕಿ ಮತ್ತು ಯೊಕೊಹಾಮಾದಂತಹ ದೊಡ್ಡ ನಗರಗಳಲ್ಲಿ ಜನಸಂಖ್ಯೆ ಹೆಚ್ಚಬಹುದೆಂಬ ಆಶಾವಾದವಿದೆ ಆದರೆ ಸಣ್ಣ ನಗರಗಳು ಕೊನೆಗೆ ಕಣ್ಮರೆಯಾಗಬಹುದು ಎಂದಿದ್ದಾರೆ.
ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯಗಳು
ಇಲ್ಲಿನ ವಯಸ್ಸಾದ ನಾಗರೀಕರ ಜೊತೆಗೆ ಹೊಂದಿಕೊಳ್ಳಲು ನಗರ ಯೋಜನೆಯ ಪ್ರಾಮುಖ್ಯತೆಯನ್ನು ಇಚಿಕಾವಾ ತಿಳಿಸಿದ್ದಾರೆ. 2040 ರಲ್ಲಿ ಜಪಾನ್ ಇನ್ನಷ್ಟು ಮಾರ್ಪಾಡುಗೊಳ್ಳಲಿದ್ದು ಹಳೆಯ ಜನಸಂಖ್ಯೆಯನ್ನು ಬೆಂಬಲಿಸಲು ನಗರಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಹೊಸ ಕಟ್ಟಡಗಳಲ್ಲಿ ಲಿಫ್ಟ್‌ಗಳು, ಹಿರಿಯ ನಾಗರಿಕರಿಗೆ ಬೇಕಾಗಿರುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಸೂಚಿಸಿದ್ದಾರೆ.