ಕಾಸರಗೋಡು: ಕಾಸರಗೋಡು ಶ್ರೀ ಪುರಂದರದಾಸ ಸಂಗೀತ ಕಲಾಮಂದಿರದ 21ನೇ ಸಂಕೀರ್ತನಾ ಆರಾಧನೋತ್ಸವ ನಿನ್ನೆ ಆರಂಭಗೊಂಡಿದ್ದು ಇಂದು ಸಮಾರೋಪಗೊಳ್ಳಲಿದೆ. ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಉದ್ಘಾಟನೆ ನಿನ್ನೆ ನಡೆಯಿತು.
ನಿನ್ನೆ ಬೆಳಿಗ್ಗೆ ಕೆ..ಎನ್. ವೆಂಕಟ್ರಮಣ ಹೊಳ್ಳ ದೀಪಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕ ಕಲ್ಮಾಡಿ ಸದಾಶಿವ ಆಚಾರ್ಯ ಹಾಗೂ ವಿವಿಧ ಸಂಗೀತ ಕಲಾವಿದರು ಉಪಸ್ಥಿತರಿದ್ದರು.