ಬದಿಯಡ್ಕ: ಮಾರಕ ರೋಗದ ಕಾರಣದಿಂದಾಗಿ ಅಡಿಕೆ ಕೃಷಿಯು ನಾಶದ ಹಂತದಲ್ಲಿದೆ. ಬೆಳೆಯು ಶೇಕಡಾ 80ರಷ್ಟು ಕುಸಿದಿದೆ. ನಿತ್ಯಜೀವನ ನಡೆಸಲು ಕಷ್ಟಪಡುತ್ತಿರುವ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಸಾಂಪತ್ತಿಕ ಸ್ಥಿತಿಯು ದಯನೀಯವಾಗಿ ರೊಗಕ್ಕೆ ಔಷಧಿ ಸಿಂಪಡನೆಗೆ ಕೂಡ ಸಾಧ್ಯವಾಗದೆ ಕಷ್ಟಪಡುತ್ತಿದ್ಡಾರೆ.
ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಇದಕ್ಕೆ ಸ್ಪಂದಿಸಿ ಅಡಿಕೆ ಕೃಷಿಕರಿಗೆ ಅಗತ್ಯವಾದ ಸಹಾಯ ಒದಗಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಫೆ. 22 ರಂದು ಶನಿವಾರ ಬೆಳಿಗ್ಗೆ 10 ಕ್ಕೆ ಬದಿಯಡ್ಕದ ಗುರುಸದನದಲ್ಲಿ ಕಿಸಾನ್ ಸೇನೆ ಸಭೆ ಆಯೋಜಿಸಿದೆ. ಎಲ್ಲಾ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ಸ್ವಿಗೊಳಿಸಬೇಕಾಗಿ ಅಧ್ಯಕ್ಷ ಚಂದ್ರಶೇಖರ ರಾವ್ ಕಲ್ಲಗ ಹಾಗೂ ಪ್ರಧಾನ ಕಾರ್ಯದರ್ಶಿ ಗೋವಿಂದ ಭಟ್ ಕೊಟ್ಟಂಗುಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.