ನವದೆಹಲಿ: ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಬಿಐ ಎರಡು ದಿನ ನಡೆಸಿದ ಶೋಧ ಕಾರ್ಯದಲ್ಲಿ ₹23.94 ಕೋಟಿಗೂ ಅಧಿಕ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ.
ಮಂಗಳವಾರ ಮತ್ತು ಬುಧವಾರ ನಡೆದ ಶೋಧದ ವೇಳೆ, ಹಲವು ಹಾರ್ಡ್‌ವೆರ್ ಕ್ರಿಪ್ಟೊ ವ್ಯಾಲೆಟ್‌ಗಳು, 121 ದಾಖಲೆಗಳು, 34 ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡಿಸ್ಕ್, 12 ಮೊಬೈಲ್ ಫೋನ್ ಮತ್ತು ಹಲವು ಇ-ಮೇಲ್ ಮತ್ತು ಮೆಸೇಜ್ ಅಪ್ಲಿಕೇಷನ್ ಸಂಗ್ರಹವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.