ಪೆರ್ಲ: ಕಾಟುಕುಕ್ಕೆ ಸನಿಹದ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ನವೀಕೃತ ಕಟ್ಟಡಗಳ ಉದ್ಘಾಟನೆ, ಅಭಿನಂದನಾ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಫೆ. 25ರಂದು ಜರುಗಲಿದೆ. ಅಂದು ಬೆಳಗ್ಗೆ 10ಕ್ಕೆ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಕಟ್ಟಡ ಉದ್ಘಾಟಿಸುವರು. ಗ್ರಾಪಂ ಸದಸ್ಯ ಶಶಿಧರ ಕುಮಾರ್ ಪಿ. ಅಧ್ಯಕ್ಷತೆ ವಹಿಸುವರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಎ. ಕುಲಾಲ್ ಪೀಠೋಪಕರಣಗಳನ್ನು ಹಸ್ತಾಂತರಿಸುವರು. ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗಾಂಭೀರ್, ಬ್ಲಾಕ್ ಕೋರ್ಡಿನೇಟರ್ ಜಯರಾಮ್ ಕೆ, ಪಿಟಿಎ ಅಧ್ಯಕ್ಷ ರಾಜೇಶ್ ಬಾಳೆಮೂಲೆ, ಪಿಇಸಿ ಕಾರ್ಯದರ್ಶಿ ಮಂಜುನಾಥ ಬಿ, ಮಾತೃಸಂಘದ ಅಧ್ಯಕ್ಷೆ ಮಾಲತಿ, ಎಸ್‍ಎಂಸಿ ಅಧ್ಯಕ್ಷ ಬಾಲಕೃಷ್ಣ ಭಟ್ ಪಾಲ್ಗೊಳ್ಳುವರು. ಈ ಸಂದರ್ಬ ನಡೆಯುವ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಎಸ್‍ಎಸ್‍ಜಿ ಅಧ್ಯಕ್ಷ ಬಟ್ಯ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಪಿಡಬ್ಲ್ಯೂಡಿ ಅಧಿಕಾರಿ ಮಹಾಲಿಂಗ ಕುರಿಯತ್ತಡ್ಕ ಅವರಿಗೆ ಸನ್ಮಾನ, ಪ್ರತಿಭಾವಂತ ಹಿರಿಯ ವಿದ್ಯಾರ್ಥಿಗಳಿಗೆ ಅಬಿನಂದನೆ ನಡೆಯುವುದು. ಮಧ್ಯಾಹ್ನ 12ರಿಂದ ಅಂಗನವಾಡಿ, ಶಾಲಾ ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯುವುದು.