ಮಧೂರು : ಶಿವರಾತ್ರಿ ಉತ್ಸವಕ್ಕೆ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ ಸಜ್ಜಾಗಿದೆ. ಫೆ. 26ರಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ವೈದಿಕ , ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿವರಾತ್ರಿ ಸಂಪನ್ನಗೊಳ್ಳಲಿದೆ. ಅಂದು ಬೆಳಿಗ್ಗೆ 6 ಕ್ಕೆ ಗಣಪತಿ ಹೋಮ, ರುದ್ರಾಭಿಷೇಕ, 8 ರಿಂದ ಭಜನೆ, ಮದ್ಯಾಹ್ನ ಮಹಾಪೂಜೆ, ಸಾಮೂಹಿಕ ಬಲಿವಾಡು, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7 ರಿಂದ ಶ್ರೀದೇವರ ಉತ್ಸವಬಲಿ ಪ್ರಾರಂಭವಾಗಲಿದೆ. 10. 30ಕ್ಕೆ ಉಳಿಯ ಶ್ರೀ ಧನ್ವಂತರಿ ಸನ್ನಿಧಿಗೆ ದೇವರ ಘೋಷಯಾತ್ರೆ, ಮರಳಿ ಬಂದು ಪರಕ್ಕಿಲ ಬೆಡಿಕಟ್ಟೆಯಲ್ಲಿ ಪೂಜೆ ಬಳಿಕ ರಾಜಾಂಗಣ ಪ್ರಸಾದ, ಶಾಸ್ತಾ ಪಾಟು ಉತ್ಸವ ಜರಗಲಿದೆ.
ಬೆಳಿಗ್ಗೆ 8ರಿಂದ ಶ್ರೀ ಮಹಾದೇವ ಶಾಸ್ತಾ ವಿನಾಯಕ ಭಜನಾ ಸಂಘ ಮತ್ತು ಮಹಿಳಾ ಭಜನಾ ಸಂಘ ಪರಕ್ಕಿಲ ಇವರಿಂದ ಭಜನಾ ಸೇವೆ ನಡೆಯಲಿದೆ. ಬೆಳಿಗ್ಗೆ 9ರಿಂದ 10.30ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯಲಿನ್ ವಾದನ ನಡೆಯಲಿದ್ದು ಹಾಡುಗಾರಿಕೆಯಲ್ಲಿ ಸರಸ್ವತಿ ಕೃಷ್ಣನ್ ಕುಮಾರಮಂಗಲ, ವಯಲಿನ್ ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶ್ರೀವಿದ್ಯಾ, ಮೃದಂಗದಲ್ಲಿ ಕೆ. ಶ್ರೀಧರ ರೈ ಕಾಸರಗೋಡು ಸಹಕರಿಸುವರು ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7ರಿಂದ ಅಮೃತ ಕಲಾಕ್ಷೇತ್ರ ರಾಮದಾಸನಗರ ಅವರಿಂದ ಶಾಸ್ತ್ರೀಯ ನೃತ್ಯ ಜರಗಲಿದೆ. ತರುಣ ಕಲಾ ವೃಂದ ಉಳಿಯ ಮತ್ತು ಕುಟುಂಬಶ್ರೀ ಪರಕ್ಕಿಲ ಸಹಕಾರ ನೀಡುವರು. ಬಾಲಗೋಕುಲದ ಮಕ್ಕಳಿಂದ ನೃತ್ಯ ಪ್ರದರ್ಶನ, ತರುಣ ಕಲಾವೃಂದದ ಮಹಿಳಾ ಸದಸ್ಯೆಯರಿಂದ ತಿರುವಾದಿರ ನೃತ್ಯ, ಶ್ರೀರಕ್ಷಾ ರಾಮ್‍ಕಿಶೋರ್ ಅವರಿಂದ ಭರತನಾಟ್ಯ ಜರಗಲಿದೆ.