ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾಸಂಘದ 40ನೇ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಭಜನೆ ಫೆ. 26ರಂದು ಜರುಗಲಿರುವುದು. ಕಾರ್ಯಕ್ರಮದ ಅಂಗವಾಗಿ ಸಂಜೆ 6.37ರಿಂದ ಮರುದಿನ ಬೆಳಗ್ಗೆ 6.49ರ ವರೆಗೆ ವಿವಿಧ ಭಜನಾ ತಂಡಗಳಿಂದ ಬಜನೆ ನಡೆಯುವುದು. 26ರಂದು ಸಂಜೆ 6.37ಕ್ಕೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕರು ದೀಪ ಪ್ರತಿಷ್ಠೆ ನಡೆಸುವ ಮೂಲಕ ಭಜನೆಗೆ ಚಾಲನೆ ನೀಡುವರು.