ಉಪ್ಪಳ: ಕೊಂಡೆವೂರು ಶೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಫೆ. 22 ರಂದು ಆರಂಭವಾದ 19 ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾ.1 ರಂದು ಸೂರ್ಯಾಸ್ತ 6.37 ಕ್ಕೆ ಭಜನಾ ಮಂಗಳಾಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ.
ಮಾ.2 ರಂದು ಭಾನುವಾರ ಬೆಳಿಗ್ಗೆ 7.30 ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಆರಂಭಗೊಂಡು ಪೂರ್ವಾಹ್ನ 10.30 ಕ್ಕೆ ಪೂರ್ಣಾಹುತಿಯಾದ ಬಳಿಕ ಮಹಾಪೂಜೆ ನಡೆಯಲಿರುವುದು.
ಬಳಿಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿರುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೂತನ ಅತಿಥಿಗೃಹ "ವಿಶ್ವಂ" ಲೋಕಾರ್ಪಣೆ ಮಾಡಲಿರುವರು. ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಪ್ರತಾಪ್ ಚಂದ್ರ ಸಾರಂಗಿ,ರಾಜ್ಯ ಸಭಾ ಸದಸ್ಯೆ, ಭಾರತೀಯ ಒಲಿಂಪಿಕ್ಸ್ ಸಂಘದ ಅಧ್ಯಕ್ಷೆ ಪಿ.ಟಿ.ಉಷಾ, ಮತ್ತು ರಾಜ್ಯಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು,ಸಿಎಂಆರ್ ಎಲ್ ವಿಶ್ವವಿದ್ಯಾನಿಲಯದ ಚೆಯರ್ ಮೆನ್ ಡಾ. ಕೆ.ಸಿ ರಾಮಮೂರ್ತಿ, ರಮೇಶ್ ರಾಜು, ರಘುರಾಮ ಶೆಟ್ಟಿ, ಎ.ಜೆ ಶೇಖರ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ. ಶೆಟ್ಟಿ ಮತ್ತು ವಿಶ್ವನಾಥ್ ವೇಂಗರೆ ಇವರುಗಳನ್ನು ಸನ್ಮಾನಿಸಲಾಗುವುದು.
ಅಪರಾಹ್ಣ 2. ರಿಂದ ""ಸವಿಜೀವನಂ ನೃತ್ಯಕಲಾ ಕ್ಷೇತ್ರ" ಕೊಂಡೆವೂರು, ಇದರ ವಿದುಷಿ ಸವಿತಾಜೀವನ್ ಮತ್ತು ಶಿಷ್ಯ ವೃಂದದವರಿಂದ " ನೃತ್ಯ ವೈಭವ-2025" ನಡೆಯಲಿರುವುದು. ಸಂಜೆ 6. ಕ್ಕೆ ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿರುವುದು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.