ಪಾಲಕ್ಕಾಡ್: 14 ವರ್ಷದ ಬಾಲಕನನ್ನು ಗೃಹಿಣಿಯೊಬ್ಬರು ಅಪಹರಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ಘಟನೆ ಅಲತ್ತೂರಿನ ಕುಣಿಸೇರಿಯಲ್ಲಿ ನಡೆದಿದೆ. ಕಂತಿರಪಾರದ ಮಹಿಳೆಯೊಬ್ಬರು ತನ್ನ ಮಗನ ಸ್ನೇಹಿತನೊಂದಿಗೆ ಊರಿಂದ ಪರಾರಿಯಾಗಿದ್ದಾರೆ.
ಪುತ್ರ ನಾಪತ್ತೆಯಾದ ಬಳಿಕ ಸಂಬಂಧಿಕರು ತನಿಖೆ ನಡೆಸಿದಾಗ ಬಾಲಕ ಆ ಮಹಿಳೆಯ ಬಳಿ ಇರುವುದು ತಿಳಿದುಬಂದಿತು.
ಬಾಲಕನ ಕುಟುಂಬದವರು ಆಲತ್ತೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲೀಸರು ನಡೆಸಿದ ತನಿಖೆಯ ವೇಳೆ, ಮಹಿಳೆ ಮತ್ತು ಬಾಲಕ ಎರ್ನಾಕುಳಂನಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ ಪೋಲೀಸರು ಗೃಹಿಣಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರೀಕ್ಷೆಯ ನಂತರ, 14 ವರ್ಷದ ಬಾಲಕ ಗೃಹಿಣಿಯ ಬಳುಇ ತಲುಪಿ ತನ್ನನ್ನು ಎಲ್ಲಿಗಾದರೂ ಕರೆದೊಯ್ಯುವಂತೆ ಹೇಳಿದನು. ಆದರೆ ಆ ಮಹಿಳೆ ಯಾರಿಗೂ ತಿಳಿಸದೆ ಮಗುವಿನೊಂದಿಗೆ ತೆರಳಿ ನಂತರ ಪ್ರಕರಣದಲ್ಲಿ ಶಂಕಿತಳಾದಳು. ಬಾಲಕ ಅಪ್ರಾಪ್ತ ವಯಸ್ಕನಾಗಿರುವ ಹಿನ್ನೆಲೆಯಲ್ಲಿ, ಗೃಹಿಣಿ ವಿರುದ್ದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.