ತಿರುಪತಿ: ತಮ್ಮ 35ನೇ ವರ್ಷದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟ ಮಹಿಳೆಯೊಬ್ಬರು ತಾವು 35 ವರ್ಷ ಉಳಿತಾಯ ಮಾಡಿದ ₹50 ಲಕ್ಷ ಹಣವನ್ನು ತಿರುಪತಿ ತಿರುಮಲದ ಟಿಟಿಡಿಯ 'ಸರ್ವ್ ಶ್ರೇಯಸ್ ಬಾಲಮಂದಿರ ಟ್ರಸ್ಟ್'ಗೆ ದೇಣಿಗೆ ನೀಡಿದ್ದಾರೆ.
ರೇಣಿಗುಂಟಾ ಮೂಲದ ಸಿ. ಮೋಹನಾ ಎನ್ನುವರು ಈ ಸಮಾಜ ಕಾರ್ಯ ಮಾಡಿದವರು.
ಸಿ. ಮೋಹನಾ ಅವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಯ ವಿಭಾಗದಲ್ಲಿ ಹಿರಿಯ ಸಂಯೋಜಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿ. ಮೋಹನಾ ಅವರು ತಾವು 35 ವರ್ಷ ಉಳಿಸಿದ ಎಲ್ಲ ಹಣವನ್ನು ಟಿಟಿಡಿಯ ಅನಾಥಾಶ್ರಮದ ಮಕ್ಕಳ ಶಿಕ್ಷಣಕ್ಕೆ ದಾನವಾಗಿ ನೀಡಿದ್ದಾರೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಮೋಹನಾ ಅವರು ಡಿಡಿ ಮೂಲಕ ಹಣವನ್ನು ದೇಣಿಗೆಯಾಗಿ ಟಿಟಿಡಿಗೆ ನೀಡಿದ್ದಾರೆ ಎಂದು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್. ವೆಂಕಯ್ಯ ಚೌಧರಿ ತಿಳಿಸಿದ್ದಾರೆ.